ರಾಜಕೀಯ - Jai Kannadamma

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಧ್ಯೇಯದೊಂದಿಗೆ ಚುನಾವಣೆಗೆ ಸ್ಪರ್ಧೆ- ಡಾ. ಎಂ.ಎನ್. ರಾಜೇಂದ್ರ ಕುಮಾರ್
ಬೆಳ್ತಂಗಡಿ: ಪಂಚಾಯತ್ ಸದಸ್ಯರು, ಸಹಕಾರಿ ಬಂಧುಗಳ ಹಾಗೂ ಆತ್ಮೀಯರ ಅಭಿಲಾಷೆಯಂತೆ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.ಅವರು ನವೆಂಬರ್ 14ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ, ಗಣಪತಿ ದೇವರ ದರ್ಶನ ನಡೆಸಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.ಗ್ರಾಮ ಪಂಚಾಯತ್, ನಗರ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್‌ಗಳ ಅಭಿವೃದ್ಧಿಯ ಹೊಣೆಹೊತ್ತು ಸ್ಪರ್ಧೆ ನಡೆಸುತ್ತಿದ್ದು, ಗ್ರಾಮೀಣ ಪ್ರದೇಶಗಳ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು. ಸಹಕಾರಿ ಕ್ಷೇತ್ರದ ಸೇವೆಯ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ಹಾಗೂ ಹಳ್ಳಿಗಳ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಿದ್ದು, ಇಲ್ಲಿರುವ ಕುಂದುಕೊರತೆಗಳ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಅಭಿವೃದ್ಧಿಯ ಚಿಂತನೆ ಪ್ರಮುಖ ಧ್ಯೇಯವಾಗಿದ್ದು, ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಬಯಸಿಲ್ಲ ಎಂದು ಹೇಳಿದರು.ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿ ಸದಸ್ಯರನ್ನು ಸಂಪರ್ಕಿಸಲಿದ್ದು, ಈ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ ರೈ, ಐಕಳ ದೇವಿಪ್ರಸಾದ್ ಶೆಟ್ಟಿ, ನಿರಂಜನ ಬಾವಂತ ಬೆಟ್ಟು, ಮಡಂತ್ಯಾರು ಪ್ರಾಥಮಿಕ‌ ಕೃಷಿ ಪತ್ತಿನ ಸಹಕಸರಿ ಸಂಘದ  ಅಧ್ಯಕ್ಷ ಅರವಿಂದ ಜೈನ್, ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಇ. ಸುಂದರ ಗೌಡ, ಬಾಹುಬಲಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಶಮಂತ ಕುಮಾರ್ ಜೈನ್, ಕುಮಾರ್ ನಾಥ್, ಉಷಾಲತಾ, ವೃಷಭ ಆರಿಗ ಮತ್ತಿತರರು ಉಪಸ್ಥಿತರಿದ್ದರು.ಮಂಗಳೂರಿನ ಓಷನ್ ಪರ್ಲ್ ಹೋಟೆಲಿನ ಮುಂಭಾಗದ ಇನ್‌ಲ್ಯಾಂಡ್ ಕಟ್ಟಡದಲ್ಲಿ ನವೆಂಬರ್ 16ರಂದು ಚುನಾವಣಾ ಸಿದ್ಧತೆಗಳಿಗಾಗಿ ಕಚೇರಿ ಆರಂಭಗೊಳ್ಳಲಿದೆ. ನವೆಂಬರ್ 22ರಂದು ಮಂಗಳೂರಿನಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.

The post ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಧ್ಯೇಯದೊಂದಿಗೆ ಚುನಾವಣೆಗೆ ಸ್ಪರ್ಧೆ- ಡಾ. ಎಂ.ಎನ್. ರಾಜೇಂದ್ರ ಕುಮಾರ್ first appeared on Jai Kannadamma.

ಸಿ.ಎಂ. ಕಾಳಜಿ ಒ.ಕೆ.-ಮಾಸ್ಕ್ ಸರಿಯಾಗಿ ಧರಿಸಿಲ್ಲ ಯಾಕೆ…
ಸಿ.ಎಂ. ಕಾಳಜಿ ಒ.ಕೆ.-ಮಾಸ್ಕ್ ಸರಿಯಾಗಿ ಧರಿಸಿಲ್ಲ ಯಾಕೆ…

ಕೊರೋನಾ ವಿರುದ್ಧದ ಹೋರಾಟದ ಅಂಗವಾಗಿ ಲಾಕ್ ಡೌನ್ನಿಗೆ ಕರೆ ನೀಡಿರುವ ತನ್ನ ಸರಕಾರದ ಕಾರ್ಯಾಚರಣೆಯ ರಿಯಾಲಿಟಿ ಚೆಕ್ ಗೆ ಇಳಿದ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರು ಎಪ್ರಿಲ್ 12ರ ಮಧ್ಯಾಹ್ನ ಯಾರಿಗೂ ಪೂರ್ವಸೂಚನೆ ನೀಡದೇ; ಬೆಂಗಳೂರು ನಗರದ ಯಶವಂತಪುರ, ಗೋರಗುಂಟೆಪಾಳ್ಯ ಸಹಿತ ಸಾಕಷ್ಟು ಕಡೆಗಳಲ್ಲಿ ಪರಿಶೀಲನೆ ನಡೆಸಿದರು. ಇಳಿ ವಯಸ್ಸಿನಲ್ಲೂ ರಾಜ್ಯದ ಜನತೆಯ ಬದುಕಿನ ಬಗ್ಗೆ ಕಾಳಜಿ ಹೊತ್ತು, ಕೊರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಸ್ವತಹ ಆಖಾಡಕ್ಕೆ ಇಳಿದಿರುವ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಎಷ್ಟು ಅಭಿನಂದಿಸಿದರೂ ಸಾಲದು. ತನ್ನ ಜೀವದ ಹಂಗು ತೊರೆದು ಕನ್ನಡಿಗರ ಜೀವ ರಕ್ಷಣೆಗಾಗಿ ಲಾಕ್ ಡೌನ್ ರಿಯಾಲಿಟಿ ಚೆಕ್ ಗೆ ಬೀದಿಗಿಳಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಈ ಸಂದರ್ಭದಲ್ಲಿ ಕೊರೋನಾ ಸೋಂಕಿನಿಂದ ರಕ್ಷಣೆಗಾಗಿ ತಾನು ಸ್ವತಹ ಧರಿಸಿದ ಮಾಸ್ಕ್ ಬಗ್ಗೆ ಗಮನ ಹರಿಸದಿದ್ದುದು ಮಾತ್ರ ಕೊರೋನಾ ಸೋಂಕು ಹರಡುವಿಕೆಯ ಭೀತಿಯಿರುವ ಇಂದಿನ ವಾತಾವರಣದಲ್ಲಿ ಸರಿಯಲ್ಲ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಹಾಕಿದ್ದರಾದರೂ ಮಾಸ್ಕ್ ಮಾತ್ರ ಮೂಗಿನ ಕೆಳಕ್ಕೆ ಇದ್ದುದನ್ನು ರಾಜ್ಯದ ಸಾಕಷ್ಟು ಮಂದಿ ಗಮನಿಸಿದ್ದಾರೆ. ಮನೆಯಿಂದ ಹೊರಗೆ ಸಾಕಷ್ಟು ಜನರಿರುವ ಪ್ರದೇಶಗಳಲ್ಲಿ ರಿಯಾಲಿಟಿ ಚೆಕ್ ಗೆ ತೆರಳುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪ ತನ್ನ‌ ಮುಖದ ಮೇಲಿರುವ ಮಾಸ್ಕಿನ‌ ಬಗ್ಗೆ ಹೆಚ್ಚಿನ‌ ನಿಗಾ ವಹಿಸಬೇಕು. ಸ್ವಲ್ಪ ಎಚ್ಚರ ತಪ್ಪಿದ ಬ್ರಿಟನ್ನಿನ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ರನ್ನೂ ಬಿಟ್ಟಿಲ್ಲ ಈ ಕೊರೋನಾ ಮಹಾಮಾರಿ. ಜನಸೇವೆ ಮಾಡುವ ಉತ್ಸಾಹದಲ್ಲಿ ಇಳಿ ವಯಸ್ಸಿನಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಪಾಯವನ್ನು ಮೈಮೇಲೆ ಎಳೆದುಕೊಳ್ಳದಿರಲಿ ಎಂದು ಹಾರೈಸೋಣಾ.
ದೇವಿಪ್ರಸಾದ್,
ಸಂಪಾದಕ, ಜೈಕನ್ನಡಮ್ಮ ಕೂಸು,
ಬೆಳ್ತಂಗಡಿ, ದಕ್ಷಿಣ ಕನ್ನಡ.

The post ಸಿ.ಎಂ. ಕಾಳಜಿ ಒ.ಕೆ.-ಮಾಸ್ಕ್ ಸರಿಯಾಗಿ ಧರಿಸಿಲ್ಲ ಯಾಕೆ… first appeared on Jai Kannadamma.