ಸಿ.ಎಂ. ಕಾಳಜಿ ಒ.ಕೆ.-ಮಾಸ್ಕ್ ಸರಿಯಾಗಿ ಧರಿಸಿಲ್ಲ ಯಾಕೆ…
ಕೊರೋನಾ ವಿರುದ್ಧದ ಹೋರಾಟದ ಅಂಗವಾಗಿ ಲಾಕ್ ಡೌನ್ನಿಗೆ ಕರೆ ನೀಡಿರುವ ತನ್ನ ಸರಕಾರದ ಕಾರ್ಯಾಚರಣೆಯ ರಿಯಾಲಿಟಿ ಚೆಕ್ ಗೆ ಇಳಿದ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರು ಎಪ್ರಿಲ್ 12ರ ಮಧ್ಯಾಹ್ನ ಯಾರಿಗೂ ಪೂರ್ವಸೂಚನೆ ನೀಡದೇ; ಬೆಂಗಳೂರು ನಗರದ ಯಶವಂತಪುರ, ಗೋರಗುಂಟೆಪಾಳ್ಯ ಸಹಿತ ಸಾಕಷ್ಟು ಕಡೆಗಳಲ್ಲಿ ಪರಿಶೀಲನೆ ನಡೆಸಿದರು. ಇಳಿ ವಯಸ್ಸಿನಲ್ಲೂ ರಾಜ್ಯದ ಜನತೆಯ ಬದುಕಿನ ಬಗ್ಗೆ ಕಾಳಜಿ ಹೊತ್ತು, ಕೊರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಸ್ವತಹ ಆಖಾಡಕ್ಕೆ ಇಳಿದಿರುವ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಎಷ್ಟು ಅಭಿನಂದಿಸಿದರೂ ಸಾಲದು. ತನ್ನ ಜೀವದ ಹಂಗು ತೊರೆದು ಕನ್ನಡಿಗರ ಜೀವ ರಕ್ಷಣೆಗಾಗಿ ಲಾಕ್ ಡೌನ್ ರಿಯಾಲಿಟಿ ಚೆಕ್ ಗೆ ಬೀದಿಗಿಳಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಈ ಸಂದರ್ಭದಲ್ಲಿ ಕೊರೋನಾ ಸೋಂಕಿನಿಂದ ರಕ್ಷಣೆಗಾಗಿ ತಾನು ಸ್ವತಹ ಧರಿಸಿದ ಮಾಸ್ಕ್ ಬಗ್ಗೆ ಗಮನ ಹರಿಸದಿದ್ದುದು ಮಾತ್ರ ಕೊರೋನಾ ಸೋಂಕು ಹರಡುವಿಕೆಯ ಭೀತಿಯಿರುವ ಇಂದಿನ ವಾತಾವರಣದಲ್ಲಿ ಸರಿಯಲ್ಲ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಹಾಕಿದ್ದರಾದರೂ ಮಾಸ್ಕ್ ಮಾತ್ರ ಮೂಗಿನ ಕೆಳಕ್ಕೆ ಇದ್ದುದನ್ನು ರಾಜ್ಯದ ಸಾಕಷ್ಟು ಮಂದಿ ಗಮನಿಸಿದ್ದಾರೆ. ಮನೆಯಿಂದ ಹೊರಗೆ ಸಾಕಷ್ಟು ಜನರಿರುವ ಪ್ರದೇಶಗಳಲ್ಲಿ ರಿಯಾಲಿಟಿ ಚೆಕ್ ಗೆ ತೆರಳುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತನ್ನ ಮುಖದ ಮೇಲಿರುವ ಮಾಸ್ಕಿನ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಸ್ವಲ್ಪ ಎಚ್ಚರ ತಪ್ಪಿದ ಬ್ರಿಟನ್ನಿನ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ರನ್ನೂ ಬಿಟ್ಟಿಲ್ಲ ಈ ಕೊರೋನಾ ಮಹಾಮಾರಿ. ಜನಸೇವೆ ಮಾಡುವ ಉತ್ಸಾಹದಲ್ಲಿ ಇಳಿ ವಯಸ್ಸಿನಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಪಾಯವನ್ನು ಮೈಮೇಲೆ ಎಳೆದುಕೊಳ್ಳದಿರಲಿ ಎಂದು ಹಾರೈಸೋಣಾ.
ದೇವಿಪ್ರಸಾದ್,
ಸಂಪಾದಕ, ಜೈಕನ್ನಡಮ್ಮ ಕೂಸು,
ಬೆಳ್ತಂಗಡಿ, ದಕ್ಷಿಣ ಕನ್ನಡ.