ಸಂಗೀತ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

ಬೆಳ್ತಂಗಡಿ: ಕರ್ನಾಟಕ ಸರಕಾರದ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ನಡೆಸಿದ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಪ್ರತೀಕ್ ವಿ. ಎಸ್. ಡಿಸ್ಟಿಂಕ್ಷನ್ ಗಳಿಸಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಇವರು ಬೆಳ್ತಂಗಡಿಯ ಸಂಗೀತ ಶಿಕ್ಷಕಿ ವಿಧುಷಿ ಕವಿತಾ ಕೋರ್ನಾಯರ ಶಿಷ್ಯರಾಗಿದ್ದು, ಬೆಳ್ತಂಗಡಿಯ ಉದ್ಯಮಿ ಲಯನ್ ವಸಂತ ಶೆಟ್ಟಿ ಮತ್ತು ಶಾಲಿನಿ ದಂಪತಿಗಳ ಪುತ್ರ ಹಾಗೂ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ.

ಯೋಗ ತರಬೇತಿ ಶಿಬಿರದ ಸಮಾರೋಪ

ಬೆಳ್ತಂಗಡಿ: ಯೋಗಾಭ್ಯಾಸವು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಬೇಕು. ಅನೇಕ ಒತ್ತಡಗಳ ಮಧ್ಯೆ ಜೀವನ ಸಾಗಿಸುವ ಇಂದಿನ ಸಂದರ್ಭದಲ್ಲಿ ಪ್ರತಿ ದಿನ ಯೋಗಾಭ್ಯಾಸಕ್ಕಾಗಿ ಸಮಯ ಮೀಸಲಿಟ್ಟು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾl ಅಶ್ವಿನ್ ಹೇಳಿದರುಅವರು ಜೂನ್ 20ರಂದು ಬೆಳ್ತಂಗಡಿಯ ಸಂತೋಮ್ ಟವರ್ ಸಭಾಂಗಣದಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ನಿಮಿತ್ತ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ […]

ಶ್ರೀ ಕ್ಷೇತ್ರ ದೇಲಂಪುರಿಯಲ್ಲಿ ನಿಧಿಕುಂಭ ಷಡಾಧಾರ ಪ್ರತಿಷ್ಠೆ

ಬೆಳ್ತಂಗಡಿ: ಸೃಷ್ಟಿಯ ಎಲ್ಲಾ ತತ್ವಗಳು ಪ್ರತಿಯೊಂದು ದೇವಾಲಯಗಳಲ್ಲಿದೆ ಎಂದು ವಾಸ್ತು ತಜ್ಞ ಪ್ರಸಾದ ಮುನಿಯಂಗಳ ಹೇಳಿದರು.ಅವರು, ಜೀರ್ಣೋದ್ಧಾರಗೊಳ್ಳುತ್ತಿರುವ ವೇಣೂರು ಸನಿಹದ ಕರಿಮಣೇಲು ಗ್ರಾಮದ ಶ್ರೀ‌ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ನಿಧಿ ಕುಂಭಾದಿ ಷಡಾಧಾರ ಪ್ರತಿಷ್ಠೆ ಸಂದರ್ಭ ಜೂನ್ 19ರಂದು ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡುತ್ತಿದ್ದರು.ಲೋಕಕ್ಕೆ ಅನುಗ್ರಹ ಸಿಗಬೇಕಾದರೆ ಭಗವಂತನ ಪ್ರತಿಷ್ಠೆ ಅಗತ್ಯ. ದೈವಿಕ ಚಿಂತನೆ ಮಾಡಲು ಅತ್ಯಂತ ಸರಳ ವಿಧಾನ ಪ್ರತಿಮಾ ಪೂಜೆಯಾಗಿದೆ. ದೇಹದ ರಚನೆಯಂತೆ ದೇವಾಲಯವೂ ಇರುತ್ತದೆ. ಪಂಚತತ್ವಗಳನ್ನು ದೇವಸ್ಥಾನದಲ್ಲಿ ಕಾಣಬಹುದಾಗಿದೆ. […]

ಬಡವರ ಮನೆಗಳ ನಳ್ಳಿನೀರಿನ ಸಂಪರ್ಕ ಕಟ್-ಬಡಪಾಯಿಗಳ ಪರದಾಟ

ಬೆಳ್ತಂಗಡಿ: ಕುಡಿಯುವ ನೀರಿನ ಸಮಸ್ಯೆ ಇರುವ ಅನಾರೋಗ್ಯ ಪೀಡಿತ ದಲಿತ ವೃದ್ಧ ದಂಪತಿಯ ಮನೆಯೂ ಸೇರಿದಂತೆ ಹಲವು ಬಡ ಕುಟುಂಬಗಳ ಕುಡಿಯುವ ನೀರಿನ ನಳ್ಳಿ ಸಂಪರ್ಕವನ್ನು ಗ್ರಾಮಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಯಾವುದೇ ನಿರ್ಣಯ ಮಾಡದೇ ಹಾಗೂ ಮುನ್ಸೂಚನೆ ಅಥವಾ ನಿಗದಿತ ಗಡುವು ನೀಡದೇ ಪಂಪು ಚಾಲಕ ದಿಡೀರ್ ಕಡಿತಗೊಳಿಸಿದ ಘಟನೆ ಕೊಯ್ಯೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮಲೆಬೆಟ್ಟು ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನಡೆದಿದೆ. ಕೊಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಬೆಟ್ಟು ನೀರಕಜೆ ಪರಿಸರದಲ್ಲಿ ಅಧ್ಯಕ್ಷರ ವಾರ್ಡಿನಲ್ಲಿ ಪರಿಶಿಷ್ಟ ಜಾತಿ […]

ನಾಟ್ಯಗುರು ಕಮಲಾಕ್ಷ ಆಚಾರ್‌ಗೆ ಅಭಿನಂದನೆ

ಬೆಳ್ತಂಗಡಿ: ದೇಶದಲ್ಲಿ ದಕ್ಷಿಣ ಭಾರತವನ್ನು ಪರಿಗಣಿಸಿದರೆ ಭರತನಾಟ್ಯಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ರಾಜಮಹಾರಾಜರ ಕಾಲದಿಂದಲೂ ನೃತ್ಯವನ್ನು ಸಮರ್ಥವಾಗಿ ಅಧ್ಯಯನಶೀಲತೆಗೆ ಒಳಪಡಿಸಿಕೊಂಡು ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯಲ್ಲಿರುವ ನೂರಕ್ಕೂ ಅಧಿಕ ಭರತನಾಟ್ಯ ಗುರುಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಗುರುವಾಗಿ ಭರತನಾಟ್ಯವನ್ನು ಸಮರ್ಥವಾಗಿ ಆರಾಧಿಸುತ್ತಿರುವ ಕಮಲಾಕ್ಷ ಆಚಾರ್ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಾಗಿದ್ದು, ಶೀಘ್ರವೇ ಈ ಪ್ರಶಸ್ತಿಯೂ ಅವರ ಮುಡಿಗೇರಿಲಿ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಆಶಿಸಿದರು.ತಾಲೂಕಿನ ಮೊದಲ ಶಾಸ್ತ್ರೀಯ ನೃತ್ಯ […]

ಕನ್ಯಾಡಿಯಲ್ಲಿ 62ನೇ ವರ್ಷದ ಶ್ರೀ ರಾಮನಾಮ ತಾರಕ ಮಂತ್ರ ಸಪ್ತಾಹ ಎಪ್ರಿಲ್ 3ರಿಂದ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದ ನಗರದಲ್ಲಿನ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ನಲ್ಲಿ ಎಪ್ರಿಲ್ 3ರಿಂದ ಎ‌ಪ್ರಿಲ್ 10ರವರೆಗೆ 62ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ, ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಕನ್ಯಾಡಿ ದೇವರಗುಡ್ಡೆ ಶ್ರೀಗುರುದೇವ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.ಅವರು ಮಾರ್ಚ್ 26ರಂದು ಕ್ಷೇತ್ರದಲ್ಲಿ‌ ಪತ್ರಿಕಾಗೋಷ್ಠಿ‌ ಕರೆದು ಏಳು ದಿನಗಳಲ್ಲಿ‌ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.ಅಹೋರಾತ್ರಿ ನಡೆಯುವ ರಾಮನಾಮ ತಾರಕ ಮಂತ್ರ ಸಪ್ತಾಹದ ಅಖಂಡ […]

ಲಯನ್ಸ್ ಕ್ಲಬ್ ಸುಲ್ಕೇರಿ ಅಸ್ತಿತ್ವಕ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ನೂತನ ಕ್ಲಬ್ ಆರಂಭಗೊಳ್ಳಲಿದೆ. ಸ್ಥಾಪಕ ಅಧ್ಯಕ್ಷರಾಗಿ ಸುಂದರ ಶೆಟ್ಟಿ, ಕಾರ್ಯದರ್ಶಿಯಾಗಿ ರವಿ ಶೆಟ್ಟಿ, ಕೋಶಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಾರಾವಿ ಶಾಖಾ ಪ್ರಬಂಧಕ ಸುಧೀರ್ ಎಸ್. ಪಿ. ಆಯ್ಕೆಗೊಂಡಿದ್ದಾರೆ. ಸ್ಥಾಪಕ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರುಗಳಾಗಿ ಸಂತೋಷ್ ಕುಮಾರ್ ಹೆಗ್ಡೆ, ಸುಲ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿ, ಸುರೇಶ್ ಭಟ್, ದೀಪಕ್ ಶೆಟ್ಟಿ ಕೊಕ್ರಾಡಿ ಆಯ್ಕೆಯಾಗಿದ್ದಾರೆ. ದಯಾಕರ ರೈ ಜೊತೆ ಕಾರ್ಯದರ್ಶಿಯ ಜವಾಬ್ದಾರಿ […]

ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳ್ತಂಗಡಿ: ಆರೋಗ್ಯ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮೊದಲ ಹಂತದಲ್ಲಿ ರೋಗ ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದು ನೆರಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಶಲ ಕೆ. ಅಭಿಪ್ರಾಯಪಟ್ಟರು. ಅವರು ಮಾರ್ಚ್ 20ರಂದು ಗಂಡಿಬಾಗಿಲಿನ ಸೈಂಟ್ ಥೋಮಸ್ ಚರ್ಚ್ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಗಂಡಿಬಾಗಿಲು ಸೈಂಟ್ ತೋಮಸ್ ಚರ್ಚಿನ ಧರ್ಮಗುರು ವಂದನೀಯ ಮ್ಯಾಥ್ಯೂ ವೆಟ್ಟಂತ್ತಡತ್ತಿಲ್ ಶಿಬಿರದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮಂಗಳೂರು ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ […]

ಚಂದ್ರಮೋಹನ್ ರೈ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ತಾಲೂಕು, ಯುವ ಬಂಟರ ವಿಭಾಗ, ಬಂಟರ ಸಂಘ ಉಜಿರೆ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಿವೃತ್ತ ಗ್ರಾಮಲೆಕ್ಕಿಗ ಚಂದ್ರಮೋಹನ್ ರೈ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉಜಿರೆ ಬೆಳಾಲು ರಸ್ತೆಯ ಅಜ್ಜರಕಲ್ಲು ಕ್ರೀಡಾಂಗಣದಲ್ಲಿ ಮಾರ್ಚ್ 20ರಂದು ನಡೆಯಿತು. ಬರೋಡಾ ತುಳು ಕೂಟದ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ, ಯುವಕರು ಒಟ್ಟಾಗಿ ಸೇರಿಕೊಂಡು ನಡೆಸುತ್ತಿರುವ ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು […]

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗುರುವಾಯನಕೆರೆ ನಾಗರಿಕರು;ನಿರ್ಲಜ್ಜ ತಾಲೂಕು ಆಡಳಿತದಿಂದ ನಿರ್ಲಕ್ಷ್ಯ ಧೋರಣೆ

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಐತಿಹಾಸಿಕ ಕೆರೆಗೆ ಕಿಡಿಗೇಡಿಗಳು ವಿಷ ಬೆರೆಸಿಯೋ ಅಥವಾ ಸ್ಥಾಪಿತ ಹಿತಾಸಕ್ತ ಪ್ರಭಾವಿಗಳು ಹರಿಸಿದ ಮಲಿನ ನೀರಿನಿಂದಲೋ ಕೆರೆಯಲ್ಲಿರುವ ಲಕ್ಷಾಂತರ ಮೀನುಗಳ ಮಾರಣ ಹೋಮವಾಗಿರುವ ವಿಚಾರ ಮಾರ್ಚ್ 13ರಂದು ಬೆಳಕಿಗೆ ಬಂದಿದೆ. ಮೀನುಗಳ ಮಾರಣ ಹೋಮ ನಡೆದು ದಿನಗಳೆರಡು ಕಳೆದರೂ ನಿರ್ಲಜ್ಜ ತಾಲೂಕು ಆಡಳಿತ ಸತ್ತ ಮೀನುಗಳ ವಿಲೇವಾರಿಗೆ ಯಾವೊಂದು ಕ್ರಮಕ್ಕೂ ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಗುರುವಾಯನಕೆರೆ ಪರಿಸರದಲ್ಲಿ ಸತ್ತ ಮೀನುಗಳಿಂದ ಹರಡುವ ದುರ್ನಾತ ಬೀರುತ್ತಿದ್ದು, ನಾಗರಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿ […]