ಮೇಷ ಜಾತ್ರೆ ರದ್ದು

ಮೇಷ ಜಾತ್ರೆ ರದ್ದು
Facebook
Twitter
LinkedIn
WhatsApp

ಮೇಷ ಜಾತ್ರೆ ರದ್ದು
ಮಚ್ಚಿನ: ರಾಜ್ಯ ಸರಕಾರ ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಇಡೀ ರಾಜ್ಯಕ್ಕೆ ಲಾಕ್ ಡೌನ್ ಘೋಷಿಸಿ; ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಅದರಂತೆ ನಾಡಿನ‌ ಪ್ರಖ್ಯಾತ ದೇಗುಲಗಳಲ್ಲಿ ಒಂದಾದ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಅರ್ಚಕರು, ತಂತ್ರಿಗಳು ಹಾಗೂ ದೈವಜ್ಞರಲ್ಲಿ ಚರ್ಚಿಸಿ ದೇಗುಲದ ವರ್ಷಾವಧಿ ಜಾತ್ರೆಯನ್ನು ರದ್ದುಪಡಿಸಲಾಗಿದೆ ಎಂದು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾl ಹರ್ಷ ಸಂಪಿಗೆತ್ತಾಯ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ. ನಿಗದಿಯಂತೆ ಎಪ್ರಿಲ್ ತಿಂಗಳ 23ರಿಂದ ಮೇ ತಿಂಗಳ 1ನೇ ತಾರೀಕಿನವರೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇಗುಲದ ವರ್ಷಾವಧಿ ಜಾತ್ರೆ ನಡೆಯಬೇಕಾಗಿತ್ತು.

Latest News

Related Posts