ಕೊಕ್ಕಡ, ಎ.14: ಕೊಕ್ಕಡದ ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ರವರು ಮಾಹಿತಿ ಹಕ್ಕಿನಡಿಯಲ್ಲಿ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾ.ಪಂ.ನಿಂದ ಕೇಳಿರುವ ಮಾಹಿತಿಗೆ ಅಸ್ಪಸ್ಟ ಹಾಗೂ ಉದ್ದಟತನದ ಉತ್ತರ ನೀಡಿದ ಇಡ್ಕಿದು ಗ್ರಾ.ಪಂ. ಪಿಡಿಒ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಅಪಾಯಕಾರಿ ಕೀಟನಾಶಕಗಳನ್ನು ಗ್ರಾ.ಪಂ ನೇತೃತ್ವದಲ್ಲಿ ಸಿಂಪಡನೆ ಮಾಡಿ ಕಳೆನಾಶ ಮಾಡಲಾಗಿದ್ದು ಈ ಬಗ್ಗೆ ತಮಗೆ ಬಂದ ಮಾಹಿತಿಯ ಸ್ಪಷ್ಟತೆಗಾಗಿ ಎಂಡೊವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ರವರು ಮಾಹಿತಿ ಹಕ್ಕಿನಡಿ ವಿವರಣೆ ಬಯಸಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಯಾವುದೇ ತಜ್ನರಿಂದ ಸಲಹೆ ಸೂಚನೆಗಳನ್ನು ಪಡೆಯಲಾಗಿದೆಯೇ, ಗ್ರಾ.ಪಂ.ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಮಾಡಲಾಗಿದೆಯೇ, ಕಳೆ ನಾಶಕ್ಕೆ ಬಳಸಿದ ರಾಸಾಯನಿಕ ದ ಹೆಸರು ಹಾಗೂ ಪ್ರಮಾಣಗಳ ಅಧಿಕೃತ ಬಿಲ್ ನ ಮಾಹಿತಿ, ರಸ್ತೆ ಬದಿಒಯಲ್ಲಿ ಕಳೆನಾಶಕ ಸಿಂಡಣೆ ಮಾಡುವಾಗ ಆಸುಪಾಸಿನ ಜನ ಹಾಗೂ ಜಾನುವಾರು ಹಾಗೂ ಪರಿಸರಕ್ಕೆ ತೊಂದರೆಯಾಗದಂತೆ ಪಂಚಾಯತ್ ತೆಗೆದುಕೊಂಡ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಇವಿಷ್ಟು ಪ್ರಶ್ಣೆಗಳಿಗೆ ಉತ್ತರ ರೂಪದಲ್ಲಿ ತಜ್ನರ ಸಲಹೆ ಪಡೆದಿರುವುದಿಲ್ಲ, ಪಂಚಾಯತ್ ಸಭೆಯಲ್ಲಿ ನಿರ್ಣಯ ಮಾಡಿರುವುದಿಲ್ಲ, ಹಾಗೂ ಕಳೆನಾಶಕ ಖರೀದಿ ಮಾಡಿರುವುದಿಲ್ಲ ಅನ್ನುವ ಉತ್ತರ ನೀಡಲಾಗಿದೆ.
ಕೊನೆಯದಾಗಿ ಪಂ.ವ್ಯಾಪ್ತಿಯಲ್ಲಿ ಕಳೆನಾಶಕ ಬಳಸಿ ಕಳೆ ನಿಯಂತ್ರಣ ಮಾಡಿರುವ ರಸ್ತೆ ಬದಿಯ ವಿವರ , ವಿಸ್ತೀರ್ಣ, ಸೇರಿಸಿದ ನೀರಿನ ಪ್ರಮಾಣ, ಖರ್ಚು ವೆಚ್ಚಗಳ ಬಗ್ಗೆ ಮಾಹಿತ ಅನ್ನುವ ಪ್ರಶ್ನೆಗೆ ಮಿತ್ತೂರು -ಸೂರ್ಯ ರಸ್ತೆ ಅಂದಾಜು 40 ಮೀಟರ್ ಅನ್ನುವ ಉತ್ತರ ನೀಡಲಾಗಿದ್ದು ಉಳಿದಂತೆ ಯಾವ ಕೀಟನಾಶಕ ಬಳಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಅನ್ನುವ ಮಾಹಿತಿಯನ್ನು ಕೊಡದಿರುವ ಮೂಲಕ ಪಿಡಿಒ ಉದ್ದಟತನ ಮೆರೆದಿದ್ದಾರೆ ಎಂದು ಶ್ರೀಧರ ಗೌಡ ಕೆಂಗುಡೇಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದಕ್ಕೊಂದು ತಾಳೆಯಾಗದ ಉತ್ತರಗಳು- ಅಕ್ರಮ ವ್ಯವಹಾರ ನಡೆದಿರುವ ಸಂಶಯ ಮೂಡಿಸುತ್ತಿದೆ ಪಿಡಿಒ ರವರ ಬೇಜಾವಬ್ದಾರಿ ಉತ್ತರ. ||
ಒಂದೆಡೆ ಯಾವುದೇ ಕಳೆನಾಶಕ ಖರೀದಿ ಮಾಡಿರುವುದಿಲ್ಲ, ಪಂಚಾಯತ್ ನ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಣಯವಾಗಿಲ್ಲ, ತಜ್ನರಿಂದ ಸಲಹೆ ಪಡೆಯಲಾಗಿಲ್ಲ ಅನ್ನುವ ಉತ್ತರ ಕೊಟ್ಟು ಇನ್ನೊಂದು ಪ್ರಶ್ನೆಗೆ ಮಿತ್ತೂರು-ಸೂರ್ಯ ರಸ್ತೆಯ ಅಂದಾಜು 40 ಮೀಟರ್ ಅನ್ನುವ ಉತ್ತರ ನೀಡಿರುವ ಪಿಡಿಒ ರವರ ಹೇಳಿಕೆಗಳಲ್ಲಿ ಸಂಶಯಾಸ್ಪದ ವಿಚಾರಗಳು ಗೋಚರಿಸುತ್ತಿದ್ದು ಅಕ್ರಮ ವ್ಯವಹಾರ ನಡೆದಿರುವ ಬಗ್ಗೆ ಸಂಶಯ ಮೂಡಿಸುತ್ತಿದೆ ಎಂದು ಮಾಹಿತಿ ಹಕ್ಕಿನಡಿ ಉತ್ತರ ಪಡೆದ ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ವರದಿ : ಗುರುಮೂರ್ತಿ. ಎಸ್. ಕೊಕ್ಕಡ.








