ಸಿರಿಯಿಂದ ಬಡವರಿಗೆ ಕಿಟ್

ಸಿರಿಯಿಂದ ಬಡವರಿಗೆ ಕಿಟ್
Facebook
Twitter
LinkedIn
WhatsApp

ಕೋರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್ ಡೌನ್ ನ ಪರಿಸ್ಥಿತಿ ಯಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ-ಬೆಳ್ತಂಗಡಿಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ಜನಾರ್ದನ ರವರ ನಿರ್ದೇಶನದಂತೆ
ಬೆಳ್ತಂಗಡಿ ತಾಲೂಕಿನ ತೀರಾ ಬಡತನವಿರುವ 200 ಕುಟುಂಬಗಳಿಗೆ ಬದುಕು ಕಟ್ಟೋಣ ಬನ್ನಿ -ಉಜಿರೆ ತಂಡದವರ ಸಹಕಾರ ದಲ್ಲಿ ಆಹಾರೋತ್ಪನ್ನಗಳ ಕಿಟ್ ಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ರವರು ಕಿಟ್ ಗಳನ್ನು ವಿತರಿಸಿ,ಸಿರಿ ಸಂಸ್ಥೆ ಯ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಸಂಸ್ಥೆ ಯ ಯೋಜನಾಧಿಕಾರಿ ರೋಹಿತ್, ಬದುಕು ಕಟ್ಟೋಣ ಬನ್ನಿ ತಂಡದ ಮುಖ್ಯಸ್ಥ ರಾದ ಮೋಹನ್ ಕುಮಾರ್, ರಾಜೇಶ್ ಪೈ,ಸಿರಿ ಸಂಸ್ಥೆಯ ಮಾರುಕಟ್ಟೆ ಪ್ರಬಂಧಕ ಸುಧಾಕರ್ ಉಪಸ್ಥಿತರಿದ್ದರು. ಸಂಸ್ಥೆಯ ಗ್ರಾಮೀಣ ಮಳಿಗೆಗಳ ಯೋಜನಾಧಿಕಾರಿ ವಿನ್ಸೆಂಟ್ ಲೋಬೊ ಸ್ವಾಗತಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಜನಜಾಗೃತಿ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ವಂದಿಸಿದರು.

Latest News

Related Posts