ಬೆಳ್ತಂಗಡಿ : ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಠಾಣಾವ್ಯಾಪ್ತಿಯ ಬಳಂಜ ಗ್ರಾಮದಲ್ಲಿ ಎಪ್ರಿಲ್ 17ರಂದು ನಡೆದಿದೆ.
ಬಳೆಂಜ ಗ್ರಾಮದ ಅಂಬ್ರಾಡಿ ಮನೆಯ ಹೆರಾಲ್ಡ್ ಸಲ್ದಾನಾ (53) ಎಂಬುವರೇ ಸನಿಹದ ಗುಡ್ಡೆಯೊಂದರಲ್ಲಿ ಇರುವ ವಿದ್ಯುತ್ ಗೋಪುರದಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಇವರು ಕೆಲ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯ ಚಿಕಿತ್ಸೆಯೂ ನಡೆಯುತ್ತಿತ್ತು. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








