ಕೊರೋನಾ ಸೋಂಕಿನ ವಿರುದ್ಧದ ಹೋರಾಟದ ಭಾಗವಾಗಿ ಇಡೀ ಊರಿಗೆ ಊರೇ ಲಾಕ್ ಡೌನ್ ಆಗಿ ಜನಸಾಮಾನ್ಯರು ದಿನಬಳಕೆಯ ವಸ್ತುಗಳ ಖರೀದಿಗೂ ಸಂಕಷ್ಟವೆದುರಿಸುತ್ತಿರುವುದನ್ನು ಮನಗಂಡ ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದವರು ಬರೋಡದ ಉಧ್ಯಮಿ- ಗುರುವಾಯನಕೆರೆ ನವಶಕ್ತಿ ನಿವಾಸಿ ಶಶಿಧರ ಶೆಟ್ಟರ ಸಹಕಾರದಲ್ಲಿ ತಾಲೂಕಿನ ಬಂಟ ಸಮಾಜದ ಆಯ್ದ ಅರ್ಹ 600 ಬಡ ಕುಟುಂಬಿಕರಿಗೆ ಆಹಾರ ವಸ್ತುಗಳ ಕಿಟ್ ನೀಡಲು ಸಂಕಲ್ಪಿಸಿದ್ದು, ಈ ಕಾರ್ಯಕ್ರಮಕ್ಕೆ ಎಪ್ರಿಲ್ 19ರಂದು ಗುರುವಾಯನಕೆರೆಯಲ್ಲಿರುವ ಬಂಟರ ಯಾನೆ ನಾಡವರ ಸಂಘದ ಸಭಾಂಗಣದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಚಾಲನೆ ನೀಡಿದರು.
ಅತ್ಯಂತ ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ, ನಿರ್ದೇಶಕರಾದ ಕೃಷ್ಣ ರೈ, ಪುಷ್ಪರಾಜ ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಚ, ಬೆಳ್ತಂಗಡಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ಸಂಘದ ಪದಾಧಿಕಾರಿಗಳಾದ ಆನಂದ ಶೆಟ್ಟಿ, ಉಮೇಶ್ ಶೆಟ್ಟಿ, ಸುರೇಶ್ ಶೆಟ್ಡಿ ಲಾಯ್ಲ, ಪ್ರಸಾದ್ ಶೆಟ್ಟಿ ಎಣಿಂಜೆ, ಕಿರಣ್ ಶೆಟ್ಟಿ, ಚಂದ್ರಮೋಹನ್ ರೈ, ಮೀನಾಕ್ಷಿ ಶೆಟ್ಟಿ ಪಡಂಗಡಿ, ಅಜಿತ್ ಶೆಟ್ಟಿ ಕೋರ್ಯಾರು, ವೆಂಕಟರಮಣ ಶೆಟ್ಟಿ ಉಜಿರೆ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಎಲ್ಲರೂ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡುವ ಮೂಲಕ ಕೊರೋನಾ ಸೋಂಕಿನ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸಿದರು.








