ಆಹಾರ ಪದಾರ್ಥಗಳ ಕಿಟ್ ವಿತರಣೆ ಗಮನ ಸೆಳೆದ ವೈಯಕ್ತಿಕ ಅಂತರ ಜಾಗೃತಿ

ಆಹಾರ ಪದಾರ್ಥಗಳ ಕಿಟ್ ವಿತರಣೆ ಗಮನ ಸೆಳೆದ ವೈಯಕ್ತಿಕ ಅಂತರ ಜಾಗೃತಿ
Facebook
Twitter
LinkedIn
WhatsApp

ಮೇಲಂತಬೆಟ್ಟು ಗ್ರಾಮದ ಕೆಲ್ಲಕೆರೆಯ ಕೊರಗ ಸಮುದಾಯದ ಕಾಲೋನಿ ಮತ್ತು ಪ.ಜಾತಿ ಕಾಲೋನಿಯ ಜನರಿಗೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೇಸ್ ನ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ನ ಸದಸ್ಯರಾದ ಹರೀಶ್ ಕುಮಾರ್ ರವರು ನೀಡಿರುವ ದೈನಂದಿನ ದಿನಸಿ ಸಾಮಾಗ್ರಿಗಳ ಆಹಾರದ ಕಿಟ್ ಗಳನ್ನು ಎಪ್ರಿಲಾ 20_ ರಂದು ಬ್ಲಾಕ್ ಕಾಂಗ್ರೇಸ್ ನಗರ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕುಮಾರ್ ಕುರ್ತೋಡಿಯವರು ವಿತರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ತಾಲೂಕು ಎಸ್ಸಿ ಘಟಕದ ಅಧ್ಯಕ್ಷರಾದ ಬಿ.ಕೆ. ವಸಂತ್ ಬೆಳ್ತಂಗಡಿ, ಜಿಲ್ಲಾ ಎಸ್ಸಿ ಘಟಕದ ಸದಸ್ಯರಾದ ಪ್ರಭಾಕರ ಶಾಂತಿಕೋಡಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ನಾರಾಯಣ ಪೂಜಾರಿ, ಜಯಂತಿ, ಸತೀಶ್ ಕೆಲ್ಲಕೆರೆ, ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರುಗಳಾದ ಸುರೇಂದ್ರ ಕೋಟ್ಯಾನ್, ಟುವಿತ್ ಕೆಲ್ಲಕೆರೆ, ಯೂತ್ ಕಾಂಗ್ರೇಸ್ ಸದಸ್ಯರಾದ ಗಣೇಶ್ ಕಣಿಯೂರು, ಪ್ರಮೋದ್ ಕೆಲ್ಲಕೆರೆ ಮತ್ತಿತರರು ಉಪಸ್ಥಿತರಿದ್ದರು. ಕೆಲ್ಲಕೆರೆ ಆಸುಪಾಸಿನ ಸುಮಾರು 96 ಕುಟುಂಬಗಳಿಗೆ ದೈನಂದಿನ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಗ್ರಾಮೀಣ ಭಾಗದ ಜನತೆಯಲ್ಲಿ‌ ಕಂಡು ಬಂದ ವೈಯಕ್ತಿಕ ಅಂತರ ಜಾಗೃತಿ ನಗರ ಪ್ರದೇಶಗಳಿಗೂ ಮಾದರಿಯಾಗಿತ್ತು.

Latest News

Related Posts