ಮೂಡಬಿದರೆ ತಾಲೂಕು ವಾಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡಿನಲ್ಲಿ ಎಪ್ರಿಲ್ 20ರಂದು ವಾಲ್ಪಾಡಿ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ಇವರ ನೇತೃತ್ವದಲ್ಲಿ ವಾಲ್ಪಾಡಿ ಯೂತ್ ಕಾಂಗ್ರೆಸ್ ಮತ್ತು ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಮಾರು 220 ಮನೆಗಳಿಗೆ ಹೋಗಿ ಕಿಟ್ ಗಳನ್ನು ವಿತರಿಸಲಾಯಿತು…… ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಮಂಗಳೂರು ಎಪಿಎಂಸಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ,ಶಿವಾನಂದ ಪಾಂಡ್ರು, ಸುಕುಮಾರ್ ಕಡಂಬ ,ಮತ್ತು ಯುತ್ ಕಾಂಗ್ರೆಸ್ ನ ಕಾರ್ಯಕರ್ತರು ಕಿಟ್ ವಿತರಣೆಯಲ್ಲಿ ಭಾಗವಹಿಸಿದ್ದರು. ವೈಯಕ್ತಿಕ ಅಂತರ ಮಾತ್ರವಲ್ಲ; ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಹುತೇಕರಿಗೆ ಕೊರೋನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಮಾಸ್ಕ್ ಧರಿಸೋದು ಕಡ್ಡಾಯ ಎಂಬುದೂ ಅರಿವಿರಲಿಲ್ಲ ಎಂಬುದು ಆತಂಕದ ವಿಚಾರವಾಗಿತ್ತು …








