
ಎಪ್ರಿಲ್21ರಂದು ಬೆಳಿಗ್ಗೆ ಬೆಳ್ತಂಗಡಿ ಗೃಹ ರಕ್ಷಕ ಇಲಾಖೆಯ ಕಛೇರಿಗೆ ಆಗಮಿಸಿದ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಕೋರೊನಾ ವೈರಸ್ ತಡೆಗಟ್ಟುವ ಸರಕಾರದ ಕಾರ್ಯಪಾಲನೆಯಲ್ಲಿ ಗೃಹ ರಕ್ಷಕ ಸಿಬ್ಬಂದಿಗಳು ತನ್ನ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.. ಮತ್ತು ಗೃಹ ರಕ್ಷಕ ಸಿಬ್ಬಂದಿಗಳ ವೇತನ ಮತ್ತು ಮೂಲಭೂತ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸರಕಾರದ ಗಮನ ಸೆಳೆದು ಸೂಕ್ತ ರೀತಿಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಕೋರೊನ ವೈರಸ್ ಲಾಕ್ಡೌನ್ ನಡುವೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಗೃಹ ರಕ್ಷಕ ಸಿಬ್ಬಂದಿಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೊಡಿ, ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಕೆ. ಪಿ. ಸಿ. ಸಿ ಎಸ್ಸಿ ಘಟಕದ ರಾಜ್ಯ ಸಮಿತಿಯ ಸದಸ್ಯರಾದ ನಾಗರಾಜ್ ಎಸ್. ಲ್ಯಾಲ, ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾದ ಬಿ. ಕೆ ವಸಂತ, ಅಲ್ಪ ಸಂಖ್ಯಾತ ಘಟಕದ ಮಾಜಿ ಅಧ್ಯಕ್ಷರಾದ ಖಾಲಿದ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾದ ಪ್ರಭಾಕರ್, ಮೊಬೈಲ್ ಪ್ಯಾಲೆಸ್ ಮಾಲಕರಾದ ಉಮೇಶ್ ,ಅಲ್ಪ ಸಂಖ್ಯಾತ ಘಟಕದ ಮುಖಂಡರಾದ ಎ. ಜೆ. ಅಜಯ್ ಹಾಜರಿದ್ದರು. ಗೃಹ ರಕ್ಷಕ ಇಲಾಖೆಯ ಬೆಳ್ತಂಗಡಿ ಘಟಕದ ಘಟಕಾಧಿಕಾರಿ ಜಯಾನಂದ ಲ್ಯಾಲ ರವರು ಕಿಟ್ ವಿತರಣೆಯನ್ನು ಸ್ವೀಕರಿಸಿ ವಿಧಾನ ಪರಿಷತ್ತಿನ ಶಾಸಕರಿಗೆ ಮತ್ತು ತಂಡದವರಿಗೆ ಕೃತಜ್ಞತೆ ಸಲ್ಲಿಸಿದರು..








