ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯವರು ತಮ್ಮ ಠಾಣಾ ವ್ಯಾಪ್ತಿಯ ಪ್ರತೀ ಗಸ್ತಿನ 2 ಅಶಕ್ತ ಕುಟುಂಬಗಳಂತೆ ಒಟ್ಟು 70 ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಅವರವರ ಮನೆಗಳಿಗೆ ಎಪ್ರಿಲ್ 20ರಂದು ತಲುಪಿಸಿ ಮಾನವೀಯತೆ ತೋರಿದರು.
ನೂತನ ಗಸ್ತು ವ್ಯವಸ್ಥೆಯ ಜನಸ್ನೇಹಿ ಪೊಲೀಸ್ ವ್ಯವಸ್ಥೆಯಂತೆ ಬೆಳ್ತಂಗಡಿ ಪಿಎಸ್ಐ ನಂದಕುಮಾರ್ ಎಂ. ಎಂ. ರವರ ನೇತೃತ್ವದಲ್ಲಿ ಠಾಣಾ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರು ತಮ್ಮ ವೇತನದಿಂದ ಅಗತ್ಯ ವಸ್ತುಗಳ ಕಿಟ್ ತಯಾರಿಸಿ ಹಂಚಿಕೆ ಮಾಡಿರುವುದಾಗಿದೆ.
ಕೋವಿಡ್ 19 ತಡೆಗಟ್ಟಲು ಸರಕಾರದ ಆದೇಶದಂತೆ ಕಳೆದ ಒಂದು ತಿಂಗಳಿನಿಂದ ಅವಿರತ ಶ್ರಮಿಸುತ್ತಿರುವ ಬೆಳ್ತಂಗಡಿ ಪೊಲೀಸರು ಠಾಣಾ ವ್ಯಾಪ್ತಿಯ ಜನಸ್ನೇಹಿ ಪೊಲೀಸರ ಅಶಕ್ತ ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ತೃಪ್ತಿಕರವಾದ ಸೇವೆ ಮಾಡಿರುವುದು ಬೆಳ್ತಂಗಡಿ ಠಾಣಾ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯ ವರಿಗೆ ಸಹಕರಿಸಿದ ತೃಪ್ತಿ ನೀಡಿದೆ. ಎನಿಸಿದೆ. ಆದರೆ ವೈಯಕ್ತಿಕ ಅಂತರ ಜಾಗೃತಿ ಪೊಲೀಸರಲ್ಲೂ ಇರದ್ದು ಅಚ್ಛರಿ ಮೂಡಿಸಿದೆ.








