ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಸ್ವಾಬ್ ಸಂಗ್ರಹ ಕೇಂದ್ರಕ್ಕೆ ಪೂಂಜಾ ಚಾಲನೆ

ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಸ್ವಾಬ್ ಸಂಗ್ರಹ ಕೇಂದ್ರಕ್ಕೆ ಪೂಂಜಾ ಚಾಲನೆ
Facebook
Twitter
LinkedIn
WhatsApp

ಬೆಳ್ತಂಗಡಿ : ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಕೊಡಮಾಡಲ್ಪಟ್ಟ ಕೋವಿಡ್-19 ಗಂಟಲು ದ್ರವದ ಮಾದರಿ ಸಂಗ್ರಹಣ ಕೇಂದ್ರವನ್ನು ಶಾಸಕ ಹರೀಶ್ ಪೂಂಜಾ ಎಪ್ರಿಲ್ 22ರಂದು ಆಸ್ಪತ್ರೆಗೆ ಹಸ್ತಾಂತರಿಸಿ ಚಾಲನೆ ನೀಡಿದರು.
ಸುಮಾರು 35 ಸಾವಿರ ರೂ. ವೆಚ್ಚದಿಂದ ನಿರ್ಮಾಣಗೊಂಡ ಈ ಕೇಂದ್ರ ಜಿಲ್ಲಾಡಳಿತದ ಆದೇಶದ ಮೇರೆಗೆ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಇದರಿಂದ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲೂ ಕೋವಿಡ್-19 ಸೋಂಕಿತ ವ್ಯಕ್ತಿಯ ಗಂಟಲು ದ್ರವ ಸಂಗ್ರಹ (ಕಿಯೋಸ್ಕ್) ನಾಳೆಯಿಂದಲೇ ಆರಂಭವಾಗಲಿದೆ. ಸೋಂಕಿತ ವ್ಯಕ್ತಿ ಮತ್ತು ವೈದ್ಯರ ನೇರ ಸಂಪರ್ಕ ತಡೆಯಲು ಉತ್ತಮ ವಿಧಾನವಾಗಿದೆ ಎಂದು ನಿರ್ಮಿತಿ ಕೇಂದ್ರದ ನಿದೇರ್ಶಕ ರಾಜೇಂದ್ರ ಕಲ್ಬಾವಿ ತಿಳಿಸಿದರು.
ತಾಲೂಕು ಆರೋಗ್ಯಾ„ಕಾರಿ ಡಾ| ಕಲಾಮಧು ಶೆಟ್ಟಿ, ಸಾರ್ವಜನಿಕ ಆಸ್ಪತ್ರೆ ಆಡಳಿತಾ„ಕಾರಿ ಡಾ| ವಿದ್ಯಾವತಿ, ಡಾ| ಆದಂ, ಸಹಾಯಕ ಆಡಳಿತಾಧಿಕಾರಿ ಶ್ರೀಕಾಂತ ಹೆಗ್ಡೆ, ಅದೀಕ್ಷಕ ಲೋಕೇಶ್, ಪ್ರಯೋಗಾಲಯ ಸಿಬಂದಿ ಕಿರಣ್ ಪಂಡಿತ್, ಬಿಜೆಪಿ ಮಂಡಲ ನಿಯೋಜಿತ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ ಕೆ.ಆರ್. ಮತ್ತು ಆಸ್ಪತ್ರೆ ಸಿಬಂದಿಗಳು ಇದ್ದರು.

Latest News

Related Posts