ಕಾಶಿಪಟ್ಣ ಪಂಚಾಯತ್ ವ್ಯಾಪ್ತಿಯಲ್ಲಿ ಆಹಾರ ಕಿಟ್ ವಿತರಣೆ, ವೈಯಕ್ತಿಕ ಅಂತರ ಇಲ್ಲೂ ಇಲ್ಲ.

ಕಾಶಿಪಟ್ಣ ಪಂಚಾಯತ್ ವ್ಯಾಪ್ತಿಯಲ್ಲಿ ಆಹಾರ ಕಿಟ್ ವಿತರಣೆ, ವೈಯಕ್ತಿಕ ಅಂತರ ಇಲ್ಲೂ ಇಲ್ಲ.
Facebook
Twitter
LinkedIn
WhatsApp

ಕೊವಿಡ್ 19ಕೊರೊನ ಸೋಂಕು ಹರಡುವಿಕೆಯನ್ನು ತಡೆಯಲು ಸರಕಾರ ಲಾಕ್ ಡೌನ್ ವಿಧಿಸಿರುವ ಪರಿಣಾಮ‌ ಗ್ರಾಮೀಣ ಭಾಗದ ಬಡವರಿಗೆ, ಕೃಷಿ-ಕೂಲಿ ಕಾರ್ಮಿಕರಿಗೆ ಜೀವನ ಸಾಗಿಸುವುದೇ ದುಸ್ತರವಾಗಿದ್ದ ಈ ಸಂಧರ್ಭದಲ್ಲಿ ಊರಿನ ದಾನಿಗಳು, ಸಾಮಾಜಿಕ ಸೇವಾ ಕಾರ್ಯಕರ್ತರ ನೆರವಿನಿಂದ ಕಾಶಿಪಟ್ಣ ಪಂಚಾಯತ್ ವತಿಯಿಂದ ಎಲ್ಲಾ ಅರ್ಹ ಬಡ ಕುಟುಂಬಿಕರಿಗೆ ಪ್ರತಿವಾರ್ಡ್ ಗಳಲ್ಲಿ ಮನೆ ಮನೆಗೆ ಹೋಗಿ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.


ಕಿಟ್ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್; ಇಲ್ಲಿನ ಗ್ರಾಮ ಪಂಚಾಯತ್ ಆಧ್ಯಕ್ಷ ಸತೀಶ್ ಕೆ.ಯವರ ನೇತೃತ್ವದಲ್ಲಿ ನಡೆಯುತ್ತಿರುವ ಮಾನವೀಯ ಕಾರ್ಯಕ್ರಮವನ್ನು ಅಭಿನಂದಿಸಿದರು.
ಕಾಶಿಪಟ್ಣ ಪಂಚಾಯತ್ ಅದ್ಯಕ್ಷ ಸತೀಶ್ ಕೆ ಮಾತನಾಡಿ ಈ ಸಂಕಷ್ಟದ ಸಂದರ್ಭದಲ್ಲಿ ಬಡಜನತೆಗೆ ಆಹಾರ ಧಾನ್ಯಗಳ‌ ಕಿಟ್ ನೀಡಲು ಆರ್ಥಿಕ ಸಹಾಯ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಆಹಾರ ಸಾಮಾಗ್ರಿಗಳ ಕಿಟ್ ಪಡೆಯುವ ಸಂದರ್ಭ ಕೊರೋನಾ ಸೋಂಕಿನ‌‌ ವಿರುದ್ಧ ಹೋರಾಟದ ಮೊದಲ ಹೆಜ್ಜೆಯೇ ವೈಯಕ್ತಿಕ ಅಂತರ ಕಾಪಾಡೋದು ಎಂಬುದನ್ನು ಇಲ್ಲಿನ ಜನತೆ ಮರೆತಂತಿತ್ತು.
ಈ ಸಂಧರ್ಭದಲ್ಲಿ ಕಾಶಿಪಟ್ಣ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಮತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಸುದೇವ ನಾಯಕ್, ಪಂಚಾಯತ್ ಸದಸ್ಯರಾದ ಅಖ್ತರ್ ಅಹ್ಮದ್ ಹಾಸ್ಕೊ, ಪ್ರವೀಣ್ ಪಿಂಟೊ,ಪೆರಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ಶೇಖ್ ಲತೀಫ್, ರಾಜ್ ಪವಿ, ಪ್ರದೀಪ್ ಕೆ ಕಾಶಿಪಟ್ಣ,ವಿನ್ಸೆಂಟ್ ಮೆನೇಜೆಸ್, ಶ್ರಾವಣ್, ಅಬ್ದುಲ್ ರಹಿಮಾನ್, ಶ್ರೀಧರ್ ಶೆಟ್ಟಿ, ಹರೀಣ ಪೂಜಾರಿ, ಮನೊಜ್, ಸುಬ್ಬಣ್ಣ, ರಿಚಾರ್ಡ್ ಪಿಂಟೊ,ಜೊರ್ಜ್ ಮಿರಾಂಡ ದುಬೈ, ಹರೀಶ್ ಹೆಗ್ಡೆ ಪಡ್ಡಂದಡ್ಕ,ಇಸ್ಮಾಯಿಲ್ ಕೆ ಪೆರಿಂಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಮೊಹಮ್ಮದ್ ಶಾಪಿ ಸ್ವಾಗತಿಸಿದರು.

Latest News

Related Posts