ದೇಶದಲ್ಲಿ ಕೋವಿಡ್ 19 ವೈರಸ್ ಹೆಚ್ಚಾದಾಗ ಇದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಗೆ ಜನತೆ ಗೌರವ ನೀಡಿ ಸಹಕರಿಸಿದ್ದು ಕೊರೋನಾ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಭಾಗವಹಿಸಿದಂತಾಗಿದೆ.. ರಾಜ್ಯದ ಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಆರ್ಥಿಕವಾಗಿ ಹಿಂದುಳಿದ ಜನತೆಗೆ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ಪಟ್ಟರು.
ಅವರು ಧರ್ಮಸ್ಥಳದಲ್ಲಿ ಎ.23 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಉಜಿರೆ ಬದುಕು ಕಟ್ಟೋಣಬನ್ನಿ ತಂಡ ದ ಸಹಕಾರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ 30,000 ಆಹಾರ ಕಿಟ್ ವಿತರಿಸಿ ಮಾದ್ಯಮದವರೊಂದಿಗೆ ಮಾತನಾಡಿದರು.
ತಾಲೂಕಿನ ಶಾಸಕ ಹರೀಶ್ ಪೂಂಜ ಅವರು ತಾಲೂಕಿನಲ್ಲಿ ಉತ್ತಮ ಕಾರ್ಯ ಕ್ರಮ ಮಾಡುತ್ತಿದ್ದಾರೆ ಅವರು ಅಭಿನಂದನಾರ್ಹರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗು ಆಶೀರ್ವಾದದಿಂದ ಮಾದರಿ ಕಾರ್ಯಕ್ರಮ ಶಾಸಕರು ಆಯೋಜಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ವೈರಸ್ ನಿಯಂತ್ರಣ ದಲ್ಲಿದ್ದು ಒಟ್ಟು 16 ಕೇಸ್ ದಾಖಲಾಗಿದ್ದು 3ಜನ ಆಸ್ಪತ್ರೆಯಲ್ಲಿದ್ದು ಒಬ್ಬರು ನಿಧನರಾಗಿರುವುದಾಗಿ ತಿಳಿಸಿದರು.
ಮುಂದಕ್ಕೆ ಜಿಲ್ಲೆಯಲ್ಲಿ ಆಶಾ ಕಾರ್ಯ ಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಮನೆ ಮನೆ ಸರ್ವೆ ನಡೆಯಲಿರುವುದಾಗಿ ಕಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ, ತಾಲೂಕು ಪಂಚಾಯತಿನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಣ ಶಶಿಧರ ಕಲ್ಮಂಜ, ಅಳದಂಗಡಿ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ಪೂಜಾರಿ ಉಂಗಿಲಬೈಲು, ಬೆಳ್ತಂಗಡಿ ಮಂಡಲ ಬಿಜೆಪಿಯ ಜಯಂತ ಕೋಟ್ಯಾನ್, ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ, ಮೋಹನ್ ಕುಮಾರ್ ಉಜಿರೆ, ರಾಜೇಶ್ ಪೈ ಉಜಿರೆ, ಸುರೇಂದ್ರ ಕುಮಾರ್ ಧರ್ಮಸ್ಥಳ ಮತ್ತಿತರರು ಹಾಜರಿದ್ದರು.








