ಕರಿಂಜೆ: ರಾಮಗುಡ್ಡೆ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ

ಕರಿಂಜೆ: ರಾಮಗುಡ್ಡೆ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ
Facebook
Twitter
LinkedIn
WhatsApp

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ 20ನೇ ವಾರ್ಡ್ ನ ರಾಮಗುಡ್ಡೆ ಪರಿಸರದ ಕುಟುಂಬಗಳಿಗೆ ವಾರ್ಡ್ ಸದಸ್ಯ ಸುರೇಶ್ ಕೊಟ್ಯಾನ್ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿರುವ ಅಕ್ಕಿ ಮತ್ತು ಇತರ ಆಹಾರ ಸಾಮಗ್ರಿಗಳನ್ನು ಒಳಗೊಂಡಿರುವ ಕಿಟ್ ಗಳನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾ ಸದಸ್ಯರಾದ ಸುರೇಶ್ ಕೊಟ್ಯಾನ್, ಜೊಸ್ಸಿ ಮಿನೇಜಸ್, ಮಾಜಿ ಸದಸ್ಯರುಗಳಾದ ಮೇರಿ ಪಿರೇರಾ, ಸುಂದರ, ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಮೆಲ್ವಿನ್ ಡಿಕೊಸ್ತ, ಐವನ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು. ಕೊರೋನಾ ಹಾವಳಿ ಮತ್ತು ಲಾಕ್ ಡೌನ್ ನಿಂದ ಜನರು ಅನುಭವಿಸುತ್ತಿರುವ ತೊಂದರೆಯನ್ನು ಮನಗಂಡು ಸುರೇಶ್ ಕೋಟ್ಯಾನ್ ಅವರು ಪ್ರತಿನಿಧಿಸುತ್ತಿರುವ 20ನೇ ವಾರ್ಡಿನ ಸುಮಾರು 150 ಕುಟುಂಬಗಳಿಗೆ ಪ್ರಾರಂಭಿಕ ಹಂತದಲ್ಲಿ ಅನಾನಾಸು ಮತ್ತು ಎರಡನೇ ಹಂತದಲ್ಲಿ ಆಹಾರದ ಕಿಟ್ ಗಳನ್ನು ವಿತರಿಸಿದ್ದಾರೆ.

Latest News

Related Posts