ಕೊರೊನ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳ ನಿಜವಾದ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿದ್ದು, ಜನರಲ್ಲಿ ಶಿಸ್ತು ತರಲು ಸಹಕರಿಸುತ್ತಿದ್ದಾರೆ ಎಂದು ಉಜಿರೆ ಶ್ರೀ ಜನಾರ್ದನ ದೇವಾಲಯದ ಶರತ್ ಕ್ರಷ್ಣ ಪಡ್ವೆಟ್ನಾಯ ಹೇಳಿದರು.

ಅವರು ಉಜಿರೆಯ ಕೃಷ್ಞಾನುಗ್ರಹ ಸಭಾಭವನದಲ್ಲಿ ಎ.25ರಂದು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದಿಂದ ತಾಲೂಕಿನ 75 ಗೃಹ ರಕ್ಷಕ ಸಿಬ್ಬಂದಿ ಯವರಿಗೆ ಆಹಾರ ಕಿಟ್ ವಿತರಿಸಿ ಮಾತನಾಡುತ್ತಿದ್ದರು.
ಶಾಸಕ ಹರೀಶ್ ಪೂಂಜ ಮಾತನಾಡಿ ದೇಶದ ಲಾಕ್ ಡೌನ್ ಸಂದರ್ಭದಲ್ಲಿ ಜನರ ನಿಯಂತ್ರಣ ಮಾಡುವಲ್ಲಿ ದಳದ ಕಾರ್ಯ ಮಹತ್ತರವಾದದು ಹಾಗೂ ಶ್ರೇಷ್ಠವಾದುದು ಎಂದರು.
ವೇದಿಕೆಯಲ್ಲಿ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್ ಇದ್ದರು. ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಸಿಬ್ಬಂದಿಯ ಪರವಾಗಿ ಧನ್ಯವಾದ ಅರ್ಪಿಸಿದರು.ಬದುಕು ಕಟ್ಟೋಣ ಬನ್ನಿ ತಂಡದ ರಾಜೇಶ್ ಪೈ ಪ್ರಸ್ತಾವಿಸಿ, ತಿಮ್ಮಯ್ಯ ನಾಯ್ಕ ನಿರೂಪಿಸಿದರು.








