ಇವರು ಅಡಿಕೆ ಸಿಪ್ಪೆ ಸುಳಿಯುವ ಕೂಲಿ ಕೆಲಸಗಾರರು. ಆದರೂ ಅವರ ಹೃದಯ ವೈಶಾಲ್ಯ ಇತರರಿಗೆ ಮಾದರಿ ಯಾಗುವಂತದ್ದು. ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಬಡಜನರು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿರುವುದನ್ನು ಕಣ್ಣಾರೆ ಕಂಡ ಇವರು ತಮ್ಮ ಉಳಿತಾಯದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ.
ಇಂದಬೆಟ್ಟು ಹಾಗೂ ಬಂಗಾಡಿ ಪರಿಸರದಲ್ಲಿ ಅಡಿಕೆ ಸಿಪ್ಪೆ ಸುಲಿಯುವ ಕೆಲಸ ಮಾಡುತ್ತಿದ್ದ ಸುಪ್ರೀತಾ ಪ್ರಸನ್ನ ಬಂಗಾಡಿ, ನಾರಾಯಣ ನೇತ್ರಾವತಿ ನಗರ , ಭಾಸ್ಕರ ನೇತ್ರಾವತಿ ನಗರ, ಅಕ್ಷಯ್ ನೇತ್ರಾವತಿ ನಗರ, ಸುಜಯ್ , ಸಂತೋಷ್ ಎಸ್. ಬಿ ಸೇರಿ ತಮ್ಮ ಉಳಿತಾಯದ ಒಂದು ಭಾಗವನ್ನು ಒಟ್ಟುಗೂಡಿಸಿ ಅಕ್ಕಿ ಖರೀದಿಸಿ ತಮ್ಮ ಪರಿಸರದ 15 ಹಸಿದ ಹೊಟ್ಟೆಗಳಿಗೆ ನೀಡಿದ್ದಾರೆ.
ಬಡವರಾದರೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಆಹಾರ ಕಿಟ್ ಗಳನ್ನು ವಿತರಣೆ ಮಾಡಿದ ಅಡಿಕೆ ಸಿಪ್ಪೆ ಸುಲಿಯುವ ಈ ಯುವಕರ ಕೆಲಸ ಮಾದರಿಯಾಗಿದೆ. ಆದರೆ ಈ ಸ್ನೇಹಿತರ ಪೈಕಿ ಒಬ್ಬ ಮಾತ್ರ ಮಾಸ್ಕ್ ಧರಿಸದೇ ಇದ್ದುದು ಕೊರೋನಾ ವೈರಸನ್ನು ಅಣಕಿಸುವ ದುಸ್ಸಾಹಸದಂತಿತ್ತು.








