ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ಇದರ ವತಿಯಿಂದ ಪೂಜಾ ಕಟ್ಟೆಯಲ್ಲಿ ಕೊರೊನ ಮುಕ್ತ ಜಗತ್ತಿಗಾಗಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಅರ್ಚಕರಾದ ಸದಾನಂದ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೊರೊನ ತಡೆಗಟ್ಟಲು ಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸೂಕ್ತ ಸಲಹೆಯನ್ನು ಸಮಿತಿಯ ಅಧ್ಯಕ್ಷರಾದ ಎಂ. ಬಾಹುಬಲಿ ಪ್ರಸಾದ್ ರವರು ನೀಡಿದರು. ಈ ಬಗ್ಗೆ ವಿವರವುಳ್ಳ ಕರಪತ್ರವನ್ನು ವಿತರಿಸಲಾಯಿತು. ವೈಯಕ್ತಿಕ ಅಂತರದತ್ತ ಎಲ್ಲರ ಚಿತ್ತವಿದ್ದುದು ವಿಶೇಷವಾಗಿತ್ತು.
50 ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಸುಂದರ ಶೆಟ್ಟಿ, ಕರುಣಾಕರ ಶೆಟ್ಟಿ, ರಮೇಶ್ ಚಂದ್ರ, ಪ್ರದೀಪ್ ರೈ, ನಿರಂಜನ ರಾವ್, ಪ್ರವೀಣ್ ಶೆಟ್ಟಿ, ಮಂಜುನಾಥ್ ಪೈ ಮತ್ತು ಚುನಾಯಿತ ಪುರಸಭಾ ಸದಸ್ಯೆ ಸುಜಾತ ಶಶಿಧರ್ ಕೋಟ್ಯಾನ್ ಉಪಸ್ಥಿತರಿದ್ದರು.








