ಕೊರೋನ ಮಹಾಮಾರಿ ನಿರ್ಮೂಲನೆಗಾಗಿ ದೇಶದ ಮಾನ್ಯ ಪ್ರಧಾನಿ ಮೋದಿಜಿ ಯವರ ಸೂಚನೆಯಂತೆ ದೇಶವೇ ಲಾಕ್ ಡೌನ್ ಆಗಿರುವ ಈ ಸಂಕಷ್ಟದ ಸಂದರ್ಭ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಕೊಕ್ಕಡ ಗ್ರಾಮದ 4 ಬೂತುಗಳಿಗೆ ತಲಾ 100 ರಂತೆ 400 ಕಿಟ್ ನೀಡಿರುವುದನ್ನು ಆಯಾ ಬೂತು ಗಳಲ್ಲಿ ಕೂಲಿ ಕಾರ್ಮಿಕರಿಗೆ, ರಿಕ್ಷಾ ಚಾಲಕರಿಗೆ, ನಿರ್ಗತಿಕರಿಗೆ ಮನೆಮನೆಗೆ ತೆರಳಿ ವಿತರಣೆ ಮಾಡಲಾಯಿತು. ಗ್ರಾಮದ 400 ಕುಟುಂಬಗಳಿಗೆ ಶ್ರಮಿಕ ನೆರವು ನೀಡಿದ ಶಾಸಕ ಹರೀಶ್ ಪೂಂಜಾರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು. ಈ ಸಂದರ್ಭ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ಈಶ್ವರ್ ಬಟ್ ಹಿತ್ತಿಲು ಶ್ರಮಿಕ ನೆರವು ಕಿಟ್ ವಿತರಣಾ ಗ್ರಾಮ ಪ್ರಮುಖ್ ಯೋಗೀಶ್ ಅಲಂಬಿಲ, ಬಿ ಜೆ ಪಿ ಪಕ್ಷದ 4 ಬೂತುಗಳ ಅಧ್ಯಕ್ಷರುಗಳಾದ ವನಿತಾ ಪೂವಾಜೆ, ಶ್ರೀನಾಥ್ ಬಡೆಕಾಯಿಲ್, ಲಿಂಗಪ್ಪ ಗೌಡ ಕಡಿರ, ಜನಾರ್ದನ್ ಕೆ. ಪಿ., ಕಾರ್ಯದರ್ಶಿಗಳಾದ ಅಶ್ವಿನಿ ರವಿ ನಾಯ್ಕ್ , ವಿಠಲ್ ಕುರ್ಲೆ, ಸಚ್ಚಿನ್ ಬಜ, ಕಿಶೋರ್ ಪುತ್ಯೆ, ಪಂಚಾಯತ್ ಸದಸ್ಯರು, ಬ್ಯಾಂಕ್ ನಿರ್ದೇಶಕರು, ಪೇಜ್ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದು ವಿತರಣೆಗೆ ಸಹಕಾರ ನೀಡಿದರು.
ವರದಿ: ಗುರುಪ್ರಸಾದ್ ಶಗ್ರಿತ್ತಾಯ








