ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಮೋದಿ ನೀಡಿದ ಕರೆಗೆ ಇವರಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲವೋ ಎಂಬ ಸಂದೇಹ ನಿಮ್ಮ ಮನದಲ್ಲಿ ಮೂಡಿದರೂ ಅಚ್ಚರಿಯಿಲ್ಲ.
ನಮ್ಮ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾರವರಿಗೆ ಕೆಲದಿನಗಳ ಹಿಂದೆ ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ ಹಾಗೂ ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು-ತೆಂಕಕಾರಂದೂರು ಇವರುಗಳು ಕೊರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಐದು ಸಾವಿರ ರೂಪಾಯಿಗಳ ಚೆಕ್ಕನ್ನು ಹಸ್ತಾಂತರಿಸಿದರು.
ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್ ಎಸ್, ಉಪಾಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ಸಂಘಟನೆಗಳ ಪರವಾಗಿ ಶಾಸಕ ಹರೀಶ್ ಪೂಂಜಾರಿಗೆ ಚೆಕ್ ಹಸ್ತಾಂತರಿಸಿದರು. ಈ ಕಾರ್ಯಕ್ರಮ ಇತರ ಸೇವಾ ಸಂಸ್ಥೆ ಹಾಗೂ ಸಾಮಾಜಿಕ ಸಂಘಟನೆಗಳಿಗೆ ಮಾದರಿ. ಆದರೆ ಈ ಚೆಕ್ ಹಸ್ತಾಂತರಿಸುವಾಗ ಪ್ರವೀಣ್ ಕುಮಾರ್ ಎಚ್. ಎಸ್. ಆಗಲೀ, ಸಂತೋಷ್ ಕುಮಾರ್ ಬಳಂಜರವರಾಗಲೀ; ಮಾತ್ರವಲ್ಲ, ಚೆಕ್ ಸ್ವೀಕರಿಸಿದ ಶಾಸಕ ಹರೀಶ್ ಪೂಂಜಾರವರಾಗಲೀ ಕೊರೋನಾ ಸೋಂಕು ತಡೆಗೆ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯೇ ಸೂಚಿಸಿ ಭಾರತೀಯರನ್ನು ಆಗ್ರಹಿಸಿದ ವೈಯಕ್ತಿಕ ಅಂತರ ಕಾಪಾಡಲು ಹಾಗೂ ಮಾಸ್ಕ್ ಧರಿಸಲು ಯಾಕೆ ಮರೆತರು ಎಂಬ ಪ್ರಶ್ನೆಗೆ ಸಂಘಟಕರು ಹಾಗೂ ಶಾಸಕರು ಉತ್ತರಿಸಬೇಕಾಗಿದೆ.








