ಮೇಷ:ಕಾರ್ಯಸಿದ್ದಿಯಿಂದ ಸಂತೋಷ, ಹಣಕಾಸಿನ ವಿಷಯದಲ್ಲಿ ಜಾಗ್ರತೆ ವಹಿಸಿ, ಬಂದುಗಳ ಆಗಮನ, ರಾಘವೇಂದ್ರ ಸ್ತೋತ್ರ ಪಠಿಸಿ. ಶುಭ ಸಂಖ್ಯೆ-9.ವೃಷಭ: ದಾಂಪತ್ಯದಲ್ಲಿ ಸುಖ ಶಾಂತಿ ನೆಮ್ಮದಿ, ಹಣಕಾಸಿನ ಸಹಾಯ ಅಪೇಕ್ಷಿತವಾಗಬಹುದು, ಗೆಳೆಯರೊಂದಿಗೆ ವಿರಸ, ನವಗ್ರಹ ಸ್ತೋತ್ರ ಪಠಣದಿಂದ ಅನುಕೂಲ. ಶುಭ ಸಂಖ್ಯೆ- 3.ಮಿಥುನ:ಸುಖ ಶಾಂತಿ ನೆಮ್ಮದಿ, ಬಂಧು ವರ್ಗದ ಸಹಕಾರ, ಅತಿಥಿಗಳ ಆಗಮನ. ಶುಭ ಸಂಖ್ಯೆ- 11.ಕರ್ಕಾಟಕ: ವ್ಯಾಪಾರ ವ್ಯವಹಾರದಲ್ಲಿ ಗೆಲುವು, ಮಕ್ಕಳಿಂದ ಸಹಕಾರ, ಸೇವಾಕಾರ್ಯಗಳಿಂದ ನೆಮ್ಮದಿ. ಶುಭ ಸಂಖ್ಯೆ-2.ಸಿಂಹ;ಮಾನಸಿಕ ಅಶಾಂತಿ, ಶತ್ರುಗಳಿಂದ ನೆಮ್ಮದಿ ನಾಶ, ಕಾರ್ಯಸಾಧನೆಗೆ ಬಹಳ ಶ್ರಮ ಪಡಬೇಕಾದೀತು. ಗಣಪತಿ ದೇವರ ದರ್ಶನ ಮಾಡಿ. ಶುಭ ಸಂಖ್ಯೆ- 6ಕನ್ಯಾ: ಮಕ್ಕಳಿಂದ ಸಹಾಯ ಸಹಕಾರ ದೊರಕೀತು, ಸಾಲ ಕೇಳುವವರಿಂದ ಕಿರಿಕಿರಿ, ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ, ದುರ್ಗಾ ಸ್ತೋತ್ರ ಪಠಿಸಿ. ಶುಭ ಸಂಖ್ಯೆ-5.ತುಲಾ:ಬಂದುಗಳಿಂದ ಕಾರ್ಯಕ್ಕೆ ವಿಘ್ನ, ದೇಹಕ್ಕೆ ದೇಹಾಯಾಸ, ನೆರೆಯವರಿಂದ ಕಿರಿಕಿರಿ, ಉತ್ತರಾರ್ಧದಲ್ಲಿ ಆರ್ಥಿಕ ಸ್ಥಿತಿ ಉತ್ತಮ. ಶುಭ ಸಂಖ್ಯೆ-1.ವೃಶ್ಚಿಕ:ಕಾರ್ಯದಲ್ಲಿ ಹಿನ್ನಡೆ, ಕಾರ್ಯಚ್ಯುತಿ, ವಾರತಾಂತ್ಯದಲ್ಲಿ ಹಣಕಾಸಿನ ಮುಗ್ಗಟ್ಟು ಪರಿಹಾರ, ಮನೆಯಾಕೆಯಿಂದ ಕಿರಿಕಿರಿ. ಆದಿತ್ಯಹೃದಯ ಪಠಿಸಿ. ಶುಭ ಸಂಖ್ಯೆ-3.ಧನು: ಹಣಕಾಸಿನ ಸ್ಥತಿ ಸುಗಮವಾದೀತು, ಮಾನಸಿಕ ಚಿಂತೆಯಿಂದ ನೆಮ್ಮದಿ ನಾಶ, ರಾಹು ಜಪದಿಂದ ಶುಭ. ಶುಭ ಸಂಖ್ಯೆ-9.ಮಕರ: ಆರೋಗ್ಯದಲ್ಲಿ ಏರುಪೇರು, ಖರ್ಚುವೆಚ್ಚದಲ್ಲಿ ಹಿಡಿತವಿರಲಿ, ವಾಹನ ಭಯ, ಇತರರ ತಪ್ಪಿಗೆ ನೀವು ಹೊಣೆಯಾಗಬೇಕಾದೀತು, ಮೃತ್ಯುಂಜಯ ಜಪ ಮಾಡುವುದರಿಂದ ಅನುಕೂಲ. ಶುಭ ಸಂಖ್ಯೆ-4.ಕುಂಭ: ಮಕ್ಕಳ ಕಾರಣದಿಂದ ಮನಸ್ಸಿಗೆ ಚಿಂತೆ, ವ್ಯವಹಾರದಲ್ಲಿ ಗೆಲುವು, ಆರ್ಥಿಕ ಸ್ಥಿತಿ ಮದ್ಯಮ, ಮನೆಯಾಕೆಯ ಸಹಾಯ. ಶುಭಸಂಖ್ಯೆ-8.ಮೀನ: ನೌಕರಿಯಲ್ಲಿ ಮೇಲಾಧಿಕಾರಿಯಿಂದ ಪ್ರಶಂಸೆ, ಸ್ಥಾನ ಲಾಭ, ದೂರ ಪ್ರಯಾಣ, ಸಂಪತ್ತಿನ ಕ್ರೋಢೀಕರಣ ಸಾಧ್ಯವಾದೀತು. ಶುಭ ಸಂಖ್ಯೆ-9.