ಬಿಗ್ ಬ್ರೇಕಿಂಗ್ ನ್ಯೂಸ್ ಶಿರಾಡಿ ಕೊಡ್ಯಕಲ್ ತಿರುವಿನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

ಬಿಗ್ ಬ್ರೇಕಿಂಗ್ ನ್ಯೂಸ್ ಶಿರಾಡಿ ಕೊಡ್ಯಕಲ್ ತಿರುವಿನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ
Facebook
Twitter
LinkedIn
WhatsApp

ಕೊಕ್ಕಡ : ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಕೊಡ್ಯಕಲ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ಒಂದು ಪಲ್ಟಿ ಆದ ಘಟನೆ ಇಂದು (28) ಬೆಳಿಗ್ಗೆ ನಡೆದಿದೆ.
ಈ ಘಟನೆಯಲ್ಲಿ ಅದೃಷ್ಟವಶಾತ್ ಗ್ಯಾಸ್ ಸೋರಿಕೆಯಾಗದಿರುವುದರಿಂದ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಇದೇ ಕೊಡ್ಯಕಲ್ ತಿರುವಿನಲ್ಲಿ ನಿರಂತರ ಗ್ಯಾಸ್ ಟ್ಯಾಂಕರ್ ಗಳು ಪಲ್ಟಿಯಾಗುತ್ತಿದ್ದು ಈ ಬಗ್ಗೆ ಚಾಲಕರಿಗೆ ಮಾಹಿತಿ ಕೊಡುವ ಕೆಲಸವು ಎಂ.ಆರ್.ಪಿ.ಎಲ್. ನಿಂದ ಆಗುತ್ತಿಲ್ಲ ಎನ್ನುವ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಕ್ವಿಕ್ ರೆಸ್ಪಾನ್ಸ್ ವೆಹಿಕಲ್ ಅಸಮರ್ಪಕ ನಿರ್ವಹಣೆ.: ಎಂ.ಆರ್.ಪಿ.ಎಲ್ ಸಂಸ್ಥೆಯು ಗ್ಯಾಸ್ ಸೋರಿಕೆಯಾದಲ್ಲಿ ನಿಯಂತ್ರಿಸಲು ಹೆದ್ದಾರಿಯಲ್ಲಿ ತುರ್ತು ವಾಹನ ವ್ಯವಸ್ಥೆ ಮಾಡಿದೆಯಾದರೂ ಈ ವಾಹನವು ಅಪಘಾತ ನಡೆದ ಬಳಿಕ ನಿಯಂತ್ರಿಸಲು ಮಾತ್ರ ಉಪಯೋಗ ವಾಗುತ್ತಿದೆ. ಇದರ ಬದಲು ಅಫಘಾತ ನಡೆಯುವ ಸ್ಥಳದ ಬಗ್ಗೆ ಚಾಲಕರಿಗೆ ಸೂಚನೆ ನೀಡಿ ಎಚ್ಚರಿಕೆ ನೀಡುವ ಕ್ರಮ ಕೈಗೊಂಡರೆ ಹೆಚ್ಚಿನ ಅಫಘಾತ ತಡೆಯಬಹುದಾಗಿದ್ದುಎಂ .ಆರ್.ಪಿ ಎಲ್ . ಸಂಸ್ಥೆಯು ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.
ನೆಲ್ಯಾಡಿ ಹಾಗೂ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದಾರೆ. ಸುಭಾಶ್ ಗುಂಡ್ಯ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ

report by: Gurumoorthi .S. Kokkada.

Latest News

Related Posts