ರೋಟರಿ ಕ್ಲಬ್ಬಿನಿಂದ ಕಾರ್ಮಿಕ ದಿನಾಚರಣೆ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಕಾರ್ಯಕ್ರಮ

ರೋಟರಿ ಕ್ಲಬ್ಬಿನಿಂದ ಕಾರ್ಮಿಕ ದಿನಾಚರಣೆ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಕಾರ್ಯಕ್ರಮ
Facebook
Twitter
LinkedIn
WhatsApp

ಮೇ 1ರಂದು ಕಾರ್ಮಿಕ ದಿನದ ಅಂಗವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿಯ ವಿನಾಯಕ ರೈಸ್ ಮಿಲ್ ನಲ್ಲಿ ಕಾರ್ಮಿಕರಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಯಿತು. ವಿನಾಯಕ ರೈಸ್ ನಲ್ಲಿನ ಸುಮಾರು ಐವತ್ತೈದು ಕಾರ್ಮಿಕರಿಗೆ ರೋಟರಿ ಕ್ಲಬ್ ಬೆಳ್ತಂಗಡಿಯ ಸದಸ್ಯರಾದ ರೋ.ಡಾ. ಶ್ರೀಹರಿ ,ಹಾಗೂ ಆನ್ ಸ್ವಾಗತ ಭಿಡೆಯವರು covid-19ರ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ನೀಡಿದರು. ರೋಟರಿ ಕ್ಲಬ್ ಪರವಾಗಿ ಎಲ್ಲ ಕಾರ್ಮಿಕರಿಗೆ ಮಾಸ್ಕ್ ಗಳನ್ನು ಮತ್ತು ಹ್ಯಾಂಡ್ ವಾಶನ್ನು ವಿತರಿಸಲಾಯಿತು. ಅಲ್ಲದೇ, ಎಲ್ಲ ಕಾರ್ಮಿಕರಿಗೆ ಹೊಸ ಬಟ್ಟೆಗಳನ್ನು ವಿತರಿಸಲಾಯಿತು ಹಾಗೂ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು‌. ಮಾಸ್ಕ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ರೋಟರಿ ಸದಸ್ಯರು ಹಾಗೂ ಮಿಲ್ಲಿನ ಕಾರ್ಮಿಕರು ಕಾರ್ಯಕ್ರಮದುದ್ದಕ್ಕೂ ವೈಯಕ್ತಿಕ ಅಂತರವನ್ನು ಕಾಯ್ದುಕೊಂಡಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಜಯರಾಮ್, ಡಾl ಶ್ರೀಹರಿ, ನಾರಾಯಣ್ ಭಿಡೆ, ಯೋಗೀಶ್ ಭಿಡೆ , ಬಿ.ಕೆ.ಧನಂಜಯ ರಾವ್ , ಶ್ರೀಧರ್ ಕೆ.ವಿ, ವಿನಾಯಕ ರೈಸ್ ಮಿಲ್ಲಿನ ಮಾಲಕರಾದ ಚಂದ್ರಕಾಂತ್ ಕಾಮತ್, ಪ್ರೇಮಾ ಕಾಮತ್ , ಶೈಲಾ ಕಾಮತ್ , ಸ್ವಾಗತ ಭಿಡೆ , ಹರಿಪ್ರಸಾದ್ ಉಪಸ್ಥಿತರಿದ್ದರು .

Latest News

Related Posts