ಮೇಷ:ಶತ್ರು ಕಾಟದಿಂದ ಮುಕ್ತರಾಗುವಿರಿ, ಉದ್ಯೋಗಿಗಳಿಗೆ ಕೆಲಸದ ಒತ್ತಡ ಅಧಿಕವಾಗಲಿದೆ. ಉತ್ಪತ್ತಿಗಿಂತ ಅಧಿಕ ವೆಚ್ಚ ಕಂಡುಬಂದೀತು. ಗಣಪತಿ ದೇವರಿಗೆ ಗರಿಕೆ ಅರ್ಪಿಸಿ. ಶುಭ ಸಂಖ್ಯೆ-9.ವೃಷಭ:ಒತ್ತಡ ಕಡಿಮೆಯಾಗಿ ಮಾನಸಿಕ ನೆಮ್ಮದಿ ಕಾಣುವಿರಿ, ಗೆಳೆಯರೊಂದಿಗೆ ಸೌಮ್ಯವಾಗಿ ವರ್ತಿಸಿ, ಮಕ್ಕಳಿಂದ ಸಹಕಾರ ದೊರೆಯುವುದು. ಶುಭ ಸಂಖ್ಯೆ- 3.ಮಿಥುನ: ಆರ್ಥಿಕ ಸ್ಥಿತಿ ಉತ್ತಮವಾದೀತು. ಪ್ರಾಕೃತಿಕ ತೊಂದರೆ ಸಂಭವಿಸಬಹುದು. ಮನೆಯಾಕೆಯ ಸಹಕಾರ ದೊರಕೀತು. ಶುಭ ಸಂಖ್ಯೆ- 11.ಕರ್ಕಾಟಕ:ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ, ಆತ್ಮಸ್ಥೈರ್ಯದಿಂದ ಕಾರ್ಯ ಸಾಧನೆಯಾದೀತು. ಆರೋಗ್ಯ ಉತ್ತಮ. ಶುಭ ಸಂಖ್ಯೆ-7.ಸಿಂಹ;ವೈಯುಕ್ತಿಕ ಕಷ್ಟಗಳಿಂದ ಕಂಗೆಡದಿರಿ, ಧೈರ್ಯಂ ಸರ್ವತ್ರ ಸಾಧನಂ ಅನ್ನುವಂತೆ ವರ್ತಿಸಿ, ಶುಭವಾರ್ತೆಯಿಂದ ಸಂತಸ. ಶುಭ ಸಂಖ್ಯೆ- 4.ಕನ್ಯಾ:ಆರೋಗ್ಯ ಚೆನ್ನಾಗಿರುವುದು. ಇಚ್ಚಿತ ಕಾರ್ಯಗಳು ಕೈಗೂಡುವುದು. ಮಕ್ಕಳಿಂದ ಕಿರಿಕಿರಿ ಸಂಭವ. ಶುಭ ಸಂಖ್ಯೆ-6.ತುಲಾ : ಆದಾಯಕ್ಕಿಂತ ಅಧಿಕ ವೆಚ್ಚದ ಕಾರಣದಿಂದ ಆತಂಕ. ದೇವರ ದರ್ಶನದಿಂದ ಮನಸ್ಸಿಗೆ ನೆಮ್ಮದಿ ಶುಭ ಸಂಖ್ಯೆ-3.ವೃಶ್ಚಿಕ:ಬಂಧು ಬಳಗದವರೊಂದಿಗೆ ಸಂಭ್ರಮದಲ್ಲಿ ಪಾಲ್ಗೊಳ್ಳುವಿರಿ, ಉದ್ಯೋಗದಲ್ಲಿ ವಿನಾ ಕಾರಣ ಕಿರಿಕಿರಿ ಸಂಭವ. ಶುಭ ಸಂಖ್ಯೆ-5.ಧನು: ನೆರೆಹೊರೆಯವರ ಕೃತ್ಯಗಳಿಂದ ಮನಸ್ಸಿಗೆ ಬೇಸರ, ಆರ್ಥಿಕ ಅಡಚಣೆ ನಿವಾರಣೆಯಾದೀತು. ಶುಭ ಸಂಖ್ಯೆ-2.ಮಕರ:ಶೀತ ಸಂಬಂದಿ ರೋಗಗಳಿಂದ ಕಿರಿಕಿರಿ, ಮಕ್ಕಳ ಕಾರ್ಯದಿಂದ ಮಾನಸಿಕ ಗೊಂದಲ, ಆದಿತ್ಯ ಹೃದಯ ಪಠಿಸಿ. ಶುಭ ಸಂಖ್ಯೆ-9.ಕುಂಭ:ಪ್ರಾಕೃತಿಕ ವಿಕೋಪದಿಂದ ನಷ್ಟ ಸಂಭವ, ಬಂಧುಗಳ ವಾರ್ತೆಯಿಂದ ಆತಂಕ, ಮೃತ್ಯುಂಜಯ ಜಪದಿಂದ ಅನುಕೂಲ. ಶುಭಸಂಖ್ಯೆ-6.ಮೀನ: ಬಹುದಿನಗಳಿಂದ ನಿರೀಕ್ಷಿತ ಕಾರ್ಯಸಾಧನೆಯಿಂದ ಸಂತೃಪ್ತಿ. ಬಂಧುಗಳ ಅಯಾಚಿತ ಸಹಾಯದಿಂದ ಉತ್ಸಾಹ ಹೆಚ್ಚೀತು. ಮಕ್ಕಳಿಂದ ಸಹಾಯ ಶುಭ ಸಂಖ್ಯೆ-8.