ಬೆಳ್ತಂಗಡಿ ತಾಲೂಕಿನ ಎಂಡೋ ಪೀಡಿತರಿಗೆ ಶಾಸಕ ಹರೀಶ್ ಪೂಂಜಾರವರಿಂದ ನೆರವು:

Facebook
Twitter
LinkedIn
WhatsApp

ಕೊಕ್ಕಡ, ಬೆಳ್ತಂಗಡಿ ತಾಲೂಕಿನ ಎಂಡೋಪೀಡಿತರ ಸಂಕಷ್ಟಕ್ಕೆ ಶಾಸಕ ಹರೀಶ್ ಪೂಂಜಾ ನೆರವಿನ ಹಸ್ತ ಚಾಚಿದ್ದು ಈ ಸಂಬಂದ ಕೊಕ್ಕಡದ ಎಂಡೋಪೀಡಿತ ಸಂತೋಷ್ ಮಿನೆಜಸ್ ಮನೆಗೆ ಭೇಟಿ ನೀಡಿ ಕಿಟ್ ನೀಡಿದರು. ಶಾಸಕರಾಗುವ ಮೊದಲೇ ಎಂಡೋಪೀಡಿತ ಪ್ರತಿಭಟನಾಕಾರರೊಂದಿಗೆ 3 ದಿನಗಳ ಕಾಲ ಕೊಕ್ಕಡದಲ್ಲಿ ನಡೆದಿದ್ದ ಧರಣಿಯಲ್ಲೂ ಪಾಲ್ಗೊಂಡು ಎಂಡೋಪೀಡಿತರ ಬಗ್ಗೆ ವಿಷೇಷ ಕಾಳಜಿ ತೋರಿಸಿದ್ದರು.
ಈ ಸಂದರ್ಬದಲ್ಲಿ ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು, ಯೋಗೀಶ್ ಗೌಡ ಆಲಂಬಿಲ, ರಾಘವ ಭಂಡಾರಿ, ಶ್ರೀಕೃಷ್ಣ ಭಟ್ ಹಿತ್ತಿಲು ಮೊದಲಾದವರು ಉಪಸ್ಥಿತರಿದ್ದರು.

ಪಟ್ರಮೆ ಗಿರಿಜಾ ಗೌಡ ರಿಗೆ ಮನೆ ನಿರ್ಮಾಣದ ಭರವಸೆ: ಜೈ ಕನ್ನಡಮ್ಮ ಈ ಕುಟುಂಬದ ಸಂಕಷ್ಟದ ವರದಿ ಪ್ರಕಟಿಸಿತ್ತು.

ಪಟ್ರಮೆ ಗ್ರಾಮದ ಅನಾರು ಮೈಕೆ ಎಂಬಲ್ಲಿ ಗಿರಿಜಾ ಗೌಡ ಎಂಬವರು ತಮ್ಮ 3 ಜನ ಮಕ್ಕಳೊಂದಿಗೆ ಕುಸಿದು ಬೀಳುವ ಗುಡಿಸಲಿನಂತಿದ್ದ ಮನೆಯಲ್ಲಿ ವಾಸವಾಗಿ ಅತಂತ್ರ ಸ್ಥಿತಿಯಲ್ಲಿರುವುದರ ಬಗ್ಗೆ ಜೈ ಕನ್ನಡಮ್ಮ ಪತ್ರಿಕೆಯು ಪಟ್ರಮೆ ಗ್ರಾಮ ಪಂಚಾಯತ್ ಸದಸ್ಯ ಶ್ಯಾಮರಾಜ್ ನೀಡಿದ ಮಾಹಿತಿಯ ಮೇರೆಗೆ ಕಳೆದ ತಿಂಗಳು ವರದಿ ಮಾಡಿತ್ತು. ಈ ವರದಿಯ ಫಲಶ್ರುತಿಯಾಗಿ ಕೊಕ್ಕಡದ ಉದ್ಯಮಿಯೊಬ್ಬರು ಸಿಮೆಂಟ್ ಶೀಟ್ ಕೊಡುವ ಬಗ್ಗೆ ಜೈ ಕನ್ನಡಮ್ಮ ಪತ್ರಿಕೆಯ ವರದಿಗಾರರನ್ನು ಸಂಪರ್ಕ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೊಕ್ಕಡದ ಉದ್ಯಮಿ ಯೊಂದಿಗೆ ಗಿರಿಜಾ ಗೌಡರ ಮನೆಗೆ ಭೇಟಿ ನೀಡಿದ ಸಂದರ್ಬದಲ್ಲಿ ಸ್ಥಳೀಯ ಕೆಲವರು ಬಂದು ಶಾಸಕರು ಹೊಸ ಮನೆಯನ್ನು ನಿರ್ಮಿಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ ಅನ್ನುವ ಮಾಹಿತಿ ತಿಳಿದು ಮರಳಿದ್ದ ಘಟನೆ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಕೊಕ್ಕಡದ ಎಂಡೋ ಸಂತ್ರಸ್ತರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಆಗಮಿಸಿದ ವೇಳೆ ಪಟ್ರಮೆ ಗ್ರಾಮದ ಗಿರಿಜಾ ಗೌಡರ ಮನೆಯ ಬಗ್ಗೆ ಜೈಕನ್ನಡಮ್ಮ ಪತ್ರಿಕೆಯ ವರದಿಗಾರರ ಪ್ರಶ್ಣೆಗೆ ಉತ್ತರಿಸಿದ ಶಾಸಕರು ಈಗಾಗಲೇ ಕಕ್ಕಿಂಜೆ ಬಳಿ ಬಡ ಕುಟುಂಬಕ್ಕೆ ಮನೆ ನಿರ್ಮಾಣವಾಗುತ್ತಿದ್ದು ಈ ಕಾಮಗಾರಿ ಮುಗಿದ ತಕ್ಷಣ ಗಿರಿಜಾ ಗೌಡರಿಗೆ ಮನೆ ನಿರ್ಮಿಸಿಕೊಡುವುದಾಗಿ ಮಾಹಿತಿ ನೀಡಿದರು.

Latest News

Related Posts