ಕುಡಿತದ ನಶೆಯಲ್ಲಿ ಹಲ್ಲೆ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

Facebook
Twitter
LinkedIn
WhatsApp

ಕಳೆದ ಮೇ 6ರ ರಾತ್ರಿ‌ ಕುಡಿತದ ನಶೆಯಲ್ಲಿ ಸ್ನೇಹಿತನಿಗೆ ಹಲ್ಲೆ ನಡೆಸಿ, ತಲೆಮರೆಸಿಕೊಂಡಿದ್ದ ಆರೋಪಿ ಲೋಕೇಶನನ್ನು ಮೇ 8ರಂದು ಬಂಧಿಸಿ ಕಾನೂನಿನ ಬೇಡಿ ತೊಡಿಸುವಲ್ಲಿ ಧರ್ಮಸ್ಥಳ‌ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಡಿತದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ಸ್ನೇಹಿತ ಸುರೇಶನ ಮೇಲೆ ಹಲ್ಲೆ ನಡೆದಿದ ಲೋಕೇಶ್, ರಕ್ತ ನೋಡುತ್ತಿದ್ದಂತೆ ನಶೆ ಇಳಿದು ಕಾನೂನಿನ ಭಯದಿಂದ ತಲೆಮರೆಸಿಕೊಂಡಿದ್ದ. ಈತನ ಪತ್ತೆ ಕಾರ್ಯಕ್ಕೆ ಮುಂದಾದ ಧರ್ಮಸ್ಥಳ ಪೊಲೀಸರು ಮೇ 8ರಂದು ಈತನಿರುವ ಜಾಗವನ್ನು ಪತ್ತೆಹಚ್ಚಿ, ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದು ಕಾನೂನಿನ‌ ಬೇಡಿ ತೊಡಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪವನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

Latest News

Related Posts