ತಾಲೂಕು ಮುಸ್ಲಿಂ ಜಮಾಅತ್‌ನಿಂದ 250 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

Facebook
Twitter
LinkedIn
WhatsApp

ಮಾಸ್ಕ್ ಧಾರಣೆಯಲ್ಲಿ ಪರ್ಫೆಕ್ಟ್-ವೈಯಕ್ತಿಕ ಅಂತರ ಪಾಲನೆಯಲ್ಲಿ ಎಡವಟ್ಟು

ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ (ಕೆ.ಎಮ್.ಜೆ.ಸಿ) ಇದರ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ತಾಲೂಕಿನ ಬ್ಲಾಕ್ ಸಮಿತಿ ಗಳ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಒಟ್ಟು 250 ಆಯ್ದ ಕುಟುಂಬಗಳಿಗೆ ಆಹಾರ ವಸ್ತುಗಳ ಕಿಟ್ ಗಳನ್ನು ಮೇ.11 ರಂದು ವಿತರಿಸ ಲಾಯಿತು. ಸಂಘಟನೆಯ ಎಲ್ಲ ಪ್ರಮುಖರೂ ಸರಿಯಾಗಿ ಮಾಸ್ಕ್ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೂ; ವೈಯಕ್ತಿಕ ಅಂತರ ಪಾಲಿಸದೇ ಎಡವಟ್ಟು ಮಾಡಿಕೊಂಡದ್ದರಿಂದ ಕೊರೋನಾ ಸೋಂಕು ಹರಡುವಿಕೆಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ ವಿಫಲರಾದರು.
ತಾಲೂಕು ಮುಸ್ಲಿಂ ಜಮಾಅತ್ ಇದರ ಅಧ್ಯಕ್ಷ ಅಧ್ಯಕ್ಷ ಸಯ್ಯಿದ್ ಎಸ್.ಎಂ ಕೋಯ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಕಾರ್ಯದರ್ಶಿ ಮುಹಮ್ಮದ್ ರಫಿ, ಉಪಾಧ್ಯಕ್ಷರಾದ ಅಬ್ಬೋನು ಮದ್ದಡ್ಕ, ಬಿ.ಎ ನಝೀರ್ ಬೆಳ್ತಂಗಡಿ, ಹಬೀಬ್ ಸಾಹೇಬ್ ಮಂಜೊಟ್ಟಿ, ಕಾರ್ಯದರ್ಶಿ ಆಲಿಯಬ್ಬ ಪುಲಾಬೆ, ಮುಹ್ಯುದ್ದೀನ್ ಉಜಿರೆ, ಅಶ್ರಫ್ ಚಿಲಿಂಬಿ ಮದ್ದಡ್ಕ, ಕೋಶಾಧಿಕಾರಿ ಎ.ಕೆ ಅಹಮ್ಮದ್ ಎರುಕಡಪ್ಪು, ವಿವಿಧ ಬ್ಲಾಕ್ ಸಮಿತಿಗಳ ಪದಾಧಿಕಾರಿಗಳಾದ ಪಿ.ಯು ಆಲಿಕುಂಞಿ ಸಖಾಫಿ ನಾವೂರು, ಆದಂ ಮಂಜೊಟ್ಟಿ, ಎಂ.ಕೆ ಬದ್ರುದ್ದೀನ್ ಪರಪ್ಪು, ಖಾಲಿದ್ ಪುಲಾಬೆ, ಝಾಕಿರ್ ಹುಸೈನ್ ಕಣಿಯೂರು, ಮುಹಮ್ಮದ್ ಬಲಿಪಾಯ, ತಲ್‌ಹತ್ ಎಂ.ಜಿ, ಸಲೀಂ ಕನ್ಯಾಡಿ, ಅಯ್ಯೂಬ್ ಗುರುವಾಯನ ಕೆರೆ, ಉಸ್ಮಾನ್ ಹಾಜಿ ಆಲಂದಿಲ, ಹಂಝ ಮದನಿ ಪೆರಾಲ್ದರಕಟ್ಟೆ, ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜಮಾಲುದ್ದೀನ್ ಲೆತೀಫಿ, ಶಮೀರ್ ವೇಣೂರು, ನೂರ್ ಅಹಮ್ಮದ್ ಬೆಳ್ತಂಗಡಿ, ಜಿಲ್ಲಾ ಸಮಿತಿ ಸದಸ್ಯ ಬಿ.ಎಮ್ ಹನೀಫ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯ ಸಮಿತಿ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲೆಬೆಟ್ಟು ಪ್ರಸ್ತಾವನೆ ಗೈದರು. ನೀಡಲಾದ ಕಿಟ್ ಅನ್ನು ಕೆಎಮ್‌ಜೆಸಿಯ 7ಬ್ಲಾಕುಗಳಲ್ಲಿ ಅಲ್ಲಿನ ಸಮಿತಿ ಆಯ್ದ ಕುಟುಂಬಗಳಿಗೆ ತಲುಪಿಸಲಿದೆ.

Latest News

Related Posts