ವಾರ ಭವಿಷ್ಯ- 11-05-2020 ರಿಂದ 17-05-2020 ರವರೆಗೆ:

ವಾರ ಭವಿಷ್ಯ: 13-04-2020 ರಿಂದ 19-04-2020 ರವರೆಗೆ
Facebook
Twitter
LinkedIn
WhatsApp

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.

ಮೇಷ:ಮೇಷ: ಆರೋಗ್ಯದ ಬಗ್ಗೆ ಎಚ್ಚರವಹಿಸಿ, ಬಂಧುಮಿತ್ರರ ನೆವನದಿಂದ ಆರ್ಥಿಕವಾಗಿ ಹಿನ್ನಡೆ, ಲಕ್ಷ್ಮೀ ಸ್ತೋತ್ರ ಪಠಿಸಿ, ವಾರಾಂತ್ಯದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವುದು.
ಶುಭ ಸಂಖ್ಯೆ-1.
ವೃಷಭ: ನೆರೆಹೊರೆಯವರಲ್ಲಿ ಕಲಹ ಉಂಟಾಗುವ ಸಂದರ್ಬ ಬರಬಹುದು, ಮನೆಯಾಕೆಯ ಸಲಹೆಯಿಂದ ಆತಂಕ ದೂರವಾದೀತು. ಮನೆಗೆ ಸ್ನೇಹಿತರ ಆಗಮನದಿಂದ ಸಂತಸ. ,
ಶುಭ ಸಂಖ್ಯೆ- 6.
ಮಿಥುನ: ವೈರಿಗಳೊಂದಿಗೆ ವ್ಯರ್ಥ ಹೋರಾಟ ಸಂಭವಸೀತು, ಮನೆ ಮಂದಿಯಿಂದ ಸಾಂತ್ವನ, ಆರೋಗ್ಯದ ಬಗ್ಗೆ ಎಚ್ಚರವಿರಲಿ. ಶಿವ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ- 3.
ಕರ್ಕಾಟಕ: ಶತ್ರುಗಳಿಗೆ ಹಿನ್ನಡೆ, ನಿಮ್ಮ ಕಾರ್ಯವೈಖರಿಯಿಂದ ಗೆಳೆಯರಿಗೆ ಸಹಾಯ, ಕೃಷಿ ವ್ಯವಹಾರಗಳಲ್ಲಿ ಗೆಲುವು.
ಶುಭ ಸಂಖ್ಯೆ-10.
ಸಿಂಹ;ಬಂಧುಗಳಿಗೆ ಅನಾರೋಗ್ಯ ಕಾರಣ ಆರ್ಥಿಕ ವೆಚ್ಚ ಕಂಡುಬರಬಹುದು, ನೌಕರಿಯಲ್ಲಿ ಭಡ್ತಿ ಸಂಭವ.
ಶುಭ ಸಂಖ್ಯೆ- 4.
ಕನ್ಯಾ: ಅಧಿಕಾರಿ ವರ್ಗದಿಂದ ಕಠಿಣ ಮಾತುಗಳನ್ನು ಕೇಳಬೇಕಾದೀತು, ಮಡದಿ ಮಕ್ಕಳಿಂದ ಸಾಂತ್ವನ, ಭೋಗ ವಸ್ತುಗಳ ಬಗ್ಗೆ ಆಸಕ್ತಿ ಅಧಿಕವಾದೀತು.
ಶುಭ ಸಂಖ್ಯೆ-8.
ತುಲಾ: ನೆಮ್ಮದಿ ನಾಶಕ್ಕೆ ಕಾರ್ಯ ವಿಳಂಬ ಕಾರಣವಾದೀತು, ಮನೆಯಾಕೆಗೆ ಅನಾರೋಗ್ಯ, ಮಕ್ಕಳ ಕಿರಿಕಿರಿ ಯಿಂದ ನೆಮ್ಮದಿ ಭಂಗವಾದೀತು, ಆದಿತ್ಯ ಹೃದಯ ಪಾರಾಯಣ ಮಾಡಿ.
ಶುಭ ಸಂಖ್ಯೆ-5.
ವೃಶ್ಚಿಕ: ಆರ್ಥಿಕ ಸ್ಥಿತಿ ಉತ್ತಮ, ವಾಹನ ಭಯ, ಅನವಶ್ಯಕ ವಿವಾದಕ್ಕೆ ಒಳಗಾಗದಂತೆ ಜಾಗ್ರತೆ ವಹಿಸಿ, ದೂರದ ನೆಂಟರ ಆಗಮನ.
ಶುಭ ಸಂಖ್ಯೆ-2.
ಧನು: ಅಪರೂಪದ ಅತಿಥಿಯಿಂದ ಕಾರ್ಯಸಾಧನೆಗೆ ಅನುಕೂಲ, ಆರ್ಥಿಕ ಸ್ಥಿತಿ ಹದಗೆಡದಂತೆ ಎಚ್ಚರವಹಿಸಿ, ಶಿವ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ-3.
ಮಕರ:ಆರೋಗ್ಯದಲ್ಲಿ ಏರುಪೇರು, ಖರ್ಚು ಅಧಿಕವಾದೀತು, ಕುಟುಂಬದಲ್ಲಿ ವಿರಸದ, ಮಕ್ಕಳಿಗಾಗಿ ಅಧಿಕ ಧನ ವ್ಯಯ.
ಶುಭ ಸಂಖ್ಯೆ-4.
ಕುಂಭ: ಶತ್ರುನಾಶದಿಂದ ನಿರಾಳ, ಆರ್ಥಿಕ ಸ್ಥಿತಿ ಸುಗಮವಾಗಿರುವುದು. ಪ್ರಯಾಣಕಾಲದಲ್ಲಿ ಎಚ್ಚರವಹಿಸಿ.
ಶುಭಸಂಖ್ಯೆ-6.
ಮೀನ: ವಿನಾ ಕಾರಣ ವಿವಾದ ಸಂಭವ, ಅಪರಿಚಿತರೊಡನೆ ವ್ಯವಹಾರದಲ್ಲಿ ಎಚ್ಚರವಿರಲಿ, ವಾರಾಂತ್ಯದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣುವಿರಿ.
ಶುಭ ಸಂಖ್ಯೆ-9.

Latest News

Related Posts