ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಮಾದರಿ ಕಾರ್ಯಕ್ರಮ.
ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಸಮುದಾಯದ ಅರ್ಹ ಅಶಕ್ತ ಕುಟುಂಬಗಳಿಗೆ ವಿತರಿಸಲು ನೀಡಲಾದ ಆಹಾರದ ಕಿಟ್ ಗಳನ್ನು ಮೇ 15ರಂದು ಇಂದಬೆಟ್ಟು ಗ್ರಾಮದಲ್ಲಿ ಫಲಾನುಭವಿಗಳಿಗೆ ನೀಡಲಾಯಿತು. ಫಲಾನುಭವಿಗಳು ಹಾಗೂ ಸಂಘಟಕರು ಸರಿಯಾಗಿ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡು; ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆಯಲ್ಲಿ ಮಾದರಿಯಾದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ ಹಾಗೂ ಇಂದಬೆಟ್ಟು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್, ಇಂದಬೆಟ್ಟು ಯುವ ಬಿಲ್ಲವ ವೇದಿಕೆಯ ಅಧ್ಯಕ್ಣ ಆನಂದ ಅಡೀಲು, ಬಂಗಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರಮೇಶ್ ಕಂಗಾಜೆ, ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆಯ ಕಾರ್ಯದರ್ಶಿ ಪಿ. ವಿನೋದ್ ಪ್ರಸಾದ್ ಕಲ್ಲಾಜೆ, ಸಂಘಟನಾ ಕಾರ್ಯದರ್ಶಿ ನವೀನ್ ಇಂದಬೆಟ್ಟು, ಸ್ಥಳೀಯ ಉದ್ಯಮಿ ಉಮೇಶ್ ಕರ್ಮಿನಡ್ಕ, ಜ್ಞಾನೇಶ್ ಪರಾರಿ ಮತ್ತಿತರರು ಹಾಜರಿದ್ದರು.







