ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಛಾದ ಅಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ನಿತಿನ್ ಯಶವಂತ್ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸಂಘದ ಸಂಘಟನಾ ಕಾರ್ಯದರ್ಶಿ ಗುರುವಾಯನಕೆರೆಯ ಉಮೇಶ್ ಕುಲಾಲ್ ಆಯ್ಕೆಯಾಗಿರುತ್ತಾರೆ.


ಬಿಜೆಪಿ ಬೆಳ್ತಂಗಡಿ ಮಂಡಲ ಹಿಂದುಳಿದ ವರ್ಗ ಮೋರ್ಛಾದ ಅಧ್ಯಕ್ಷರಾಗಿ ನಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಗೌಡ ಆಯ್ಕೆಯಾದರೆ, ಪರಿಶಿಷ್ಟ ಜಾತಿ ಮೋರ್ಛಾದ ಅಧ್ಯಕ್ಷರಾಗಿ ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಆಯ್ಕೆಯಾಗಿರುತ್ತಾರೆ. ಪರಿಶಿಷ್ಟ ಪಂಗಡದ ಬೆಳ್ತಂಗಡಿ ಮಂಡಲ ಮೋರ್ಛಾ ಅಧ್ಯಕ್ಷರಾಗಿ ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳನೀರು ಹರೀಶ್ ಆಯ್ಕೆಯಾಗಿರುತ್ತಾರೆ. ಈ ಎಲ್ಲ ಮೋರ್ಛಾಗಳಿಗೆ ಇತರ ಪದಾಧಿಕಾರಿಗಳ ಆಯ್ಕೆ ಮುಂದಿನ ದಿನಗಳಲ್ಲಿ ನಡೆಯಲಿದೆ.







