ಖಚಿತ ಮಾಹಿತಿ ಪಡೆದು ಮೇ 19ರಂದು ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ಪವನ್ ಕುಮಾರ್, ಪಂಚರು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ನೆರಿಯ ಗ್ರಾಮದ ಇಟ್ವಾಡಿ ಎಂಬಲ್ಲಿರುವ ದಾವೂದ್ ಎಂಬಾತನ ಮನೆಯ ಸಮೀಪವಿದ್ದ ಆಕ್ರಮ ಗೋಮಾಂಸ ಅಡ್ಡೆಗೆ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ದಾವೂದ್ ಪೊಲೀಸರು ಬರುವುದನ್ನು ನೋಡಿ ಮನೆಯ ಹಿಂಬದಿಯ ಬಾಗಿಲಿನಿಂದ ಪರಾರಿಯಾಗಿದ್ದಾನೆ. ಪೊಲೀಸರು ಮನೆಯ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಮನೆಯ ಹಿಂಬಾಗದಲ್ಲಿಯೇ ಜಾನುವಾರಿನ ದೇಹದ ಅವಯವಗಳು ಪತ್ತೆಯಾಗಿದ್ದು, ದಾವೂದ್ ಎಲ್ಲಿಂದಲೋ ಯಾವುದೋ ಜಾನುವಾರನ್ನು ಕಳವು ಮಾಡಿ, ಅಕ್ರಮವಾಗಿ ಜಾನುವಾರನ್ನು ಕೊಲೆ ಮಾಡಿ ಮಾರಾಟ ಮಾಡುವ ಉದ್ಧೇಶದಿಂದ ಮಾಂಸ ಮಾಡಿದ್ದು ಪತ್ತೆಯಾಗಿದ್ದು, ಆರೋಪಿ ದಾವೂದ್ ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.







