ಆರೋಪಿಗಳಿಬ್ಬರ ಬಂಧನ-ಪ್ರಕರಣ ದಾಖಲು
ಖಚಿತ ಮಾಹಿತಿಯ ಮೇರೆಗೆ ಮೇ 20ರ ಬುಧವಾರ ಇಳಂತಿಲ ಗ್ರಾಮದ ಅಗರ್ತ ನಿವಾಸಿ ಮಹಮ್ಮದ್ ಅಶ್ರಫರ ಮನೆಗೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಡಿ. ಎಸ್. ವೀರಯ್ಯ ನೇತೃತ್ವದ ಪೊಲೀಸರ ತಂಡ ಮನೆಯಲ್ಲೇ ಕಸಾಯಿಖಾನೆ ನಿರ್ಮಿಸಿ, ಅಕ್ರಮವಾಗಿ ಕದ್ದ ಹಸುಗಳನ್ನು ಕೊಂದು ಮಾಂಸ ಮಾಡಿ ಮಾರಾಟ ಮಾಡುವ ಅಕ್ರಮ ದಂದೆಯನ್ನು ಭೇದಿಸಿ, ಆರೋಪಿಗಳಿಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಮಾರು 1ಕ್ವಿಂಟಾಲಿನಷ್ಟು ಗೋಮಾಂಸ, ಮಾಂಸ ತೂಕ ಮಾಡಲು ಇರಿಸಲಾದ ತೂಕದ ಯಂತ್ರ ಸಹಿತ ಮಾಂಸ ಸಿದ್ಧಪಡಿಸಲು ಉಪಯೋಗಿಸಲಾದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡ ಪೊಲೀಸರು, ಆರೋಪಿಗಳಾದ ಮಹಮ್ಮದ್ ಅಶ್ರಫ್ ಹಾಗೂ ಸಿಬಾತ್ತುಲ್ಲಾರನ್ನು ಬಂಧಿಸಿದ್ದಾರೆ.







