ಮೇಷ:ಅನಿರೀಕ್ಷಿತ ರೂಪದಲ್ಲಿ ಕಾರ್ಯಸಾಧನೆಯಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕಿಂತ ಅಧಿಕ ಯಶಸ್ಸು ದೊರಕೀತು. ತೃತೀಯದ ರಾಹು ಭಾಗ್ಯಕಾರಕನಾಗಿ ನೆಮ್ಮದಿಗೆ ಕಾರಣವಾಗುವನು. ಶುಭ ಸಂಖ್ಯೆ-9.ವೃಷಭ:ಮೃಷ್ಟಾನ್ನ ಭೋಜನದಿಂದ ಸಂತೃಪ್ತಿ, ವಾರಾಂತ್ಯಕ್ಕೆ ಅಜೀರ್ಣದಿಂದ ಆಲಸ್ಯ ಉಂಟಾದೀತು. ಸ್ನೇಹಿತರಿಗಾಗಿ ಹಣ ವೆಚ್ಚ ಮಾಡಬೇಕಾದ ಪ್ರಸಂಗ ಒದಗೀತು. ಕಾರ್ಯಸಿದ್ದಿಯಿಂದ ನೆಮ್ಮದಿ. ಶುಭ ಸಂಖ್ಯೆ- 3.ಮಿಥುನ:ಹಣಕಾಸಿನ ಮುಗ್ಗಟ್ಟಿನಿಂದ ಪರಿತಪಿಸಬೇಕಾದೀತು. ಮೇಲಾಧಿಕಾರಿಗಳ ಕಿರುಕುಳದಿಂದ ನೆಮ್ಮದಿ ನಾಶ, ಆಪ್ತ ಬಂಧುವಿನ ನೆರವಿನಿಂದ ಕಿರಿಕಿರಿ ಕೊಂಚ ಕಡಿಮೆಯಾದೀತು. ಶುಭ ಸಂಖ್ಯೆ- 11.ಕರ್ಕಾಟಕ:ದಂಪತಿಗಳಲ್ಲಿ ಪರಸ್ಪರ ಅನ್ಯೋನ್ಯತೆಯಿಂದ ಸಂತೃಪ್ತಿ, ಮಕ್ಕಳ ನೆರವಿನಿಂದ ಲಾಭ, ದೇವರ ದರ್ಶನದಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ. ನೆಂಟರಿಷ್ಟರ ಆಗಮನ. ಶುಭ ಸಂಖ್ಯೆ-8.ಸಿಂಹ;ದೃಢ ನಿರ್ಣಯ ಕೈಗೊಳ್ಳುವಲ್ಲಿ ಹಿನ್ನಡೆಯುಂಟಾದೀತು. ಗೆಳೆಯರ ನೆರವನ್ನು ಪಡೆಯಿರಿ. ಆದಿತ್ಯ ಹೃದಯ ಪಾರಾಯಣ ಮಾಡಿ . ಶುಭ ಸಂಖ್ಯೆ- 6.ಕನ್ಯಾ: ಮಾಡದ ತಪ್ಪಿಗೆ ನೀವು ಹೊಣೆಯಾಗಬೇಕಾದ ಪ್ರಸಂಗ ಎದುರಾಗಬಹುದು. ಮಕ್ಕಳ ಕಾರಣದಿಂದ ಮಾನ ಸನ್ಮಾನಗಳಿಗೆ ಭಾಜನರಾಗುವಿರಿ. ಪತ್ನಿಯ ಕಿರಿಕಿರಿಯಿಂದ ಕಲಹ ಕಾರಣವಾದೀತು. ತಾಳ್ಮೆಯಿಂದ ವ್ಯವಹರಿಸಿ. . ಶುಭ ಸಂಖ್ಯೆ-9.ತುಲಾ:ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಕಾರ್ಯಗಳು ಕೈಗೂಡಿದ ಸಂತೃಪ್ತಿ ನಿಮ್ಮದಾಗಲಿದೆ. ಬಂಧುಗಳ ಆಪತ್ತಿನ ವಾರ್ತೆಯಿಂದ ದುಖಃ. ವಾಹನದಿಂದ ಅಪಾಯ ಸಂಭವಿಸಬಹುದು. ವೆಂಕಟೇಶ್ವರ ಸ್ತೋತ್ರ ಪಠಿಸಿ. . ಶುಭ ಸಂಖ್ಯೆ-7.ವೃಶ್ಚಿಕ:ಉದ್ಯೋಗಿಗಳಿಗೆ ಸ್ಥಾನ ಲಾಭ, ಮನ್ನಣೆ ಪ್ರಾಪ್ತಿ, ಆರೋಗ್ಯದ ಬಗ್ಗೆ ಎಚ್ಚರವಿರಲಿ, ಮಕ್ಕಳ ಮಾತಿನ ವರ್ತನೆಯಿಂದ ಮನಸ್ಸಿಗೆ ಕಿರಿಕಿರಿ, ಕುಜ ಪ್ರಾರ್ಥನೆಯಿಂದ ನೆಮ್ಮದಿ. ಶುಭ ಸಂಖ್ಯೆ-8.ಧನು: ಆಕಸ್ಮಿಕ ಧನಲಾಭದಿಂದ ಸಂತೃಪ್ತಿ, ಸಾಹಿತ್ಯ ಸಂಬಂದಿ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಗೆಳೆಯರೊಂದಿಗಿನ ಸಂಭಾಷಣೆಯಲ್ಲಿ ಜಾಗ್ರತೆ ವಹಿಸಿ. ಶುಭ ಸಂಖ್ಯೆ-7.ಮಕರ:ಶಿರೋವೇದನೆಯಿಂದ ಬಳಲುವ ಸಾಧ್ಯತೆ ಇದೆ, ಹಣಕಾಸಿನ ಸ್ಥಿತಿ ಉತ್ತಮವಿರದು. ಕಾರ್ಯಗಳಿಗೆ ಮಕ್ಕಳ ಸಹಕಾರ ದೊರಕೀತು. ಶುಭ ಸಂಖ್ಯೆ-8.ಕುಂಭ:ನಿಮ್ಮ ವಸ್ತುಗಳು ಕಳೆದುಹೋಗುವ ಸಾಧ್ಯತೆಗಳಿದೆ ಎಚ್ಚರವಾಗಿರಿ. ಆರೋಗ್ಯ ಸ್ಥಿತಿ ಉತ್ತಮವಾಗಿರುವುದು. ಮಕ್ಕಳೊಂದಿಗೆ ವಿರಸ ಸಾಧ್ಯತೆ. ಕೃಷ್ಣಾಷ್ಟೋತ್ತರ ಪಠಿಸಿ. ಶುಭಸಂಖ್ಯೆ-7.ಮೀನ: ಶತ್ರುಗಳ ಕಾಟದಿಂದ ಮುಕ್ತರಾಗುವಿರಿ, ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಕೆಲಸದ ಒತ್ತಡ ಅಧಿಕವಾಗುವ ಸಂಭವವಿದೆ. ದೇವರ ದರ್ಶನದಿಂದ ಸಂತುಷ್ಟಿ. ಶುಭ ಸಂಖ್ಯೆ-6.