ಕಲ್ಲೇರಿ: ತಣ್ಣೀರುಪಂಥ ಗ್ರಾಮ ಪಂಚಾಯತಿನ ಕಲ್ಲೇರಿಯಲ್ಲಿ ನಿರ್ಮಾಣ ಹಂತದಲ್ಲಿರುವ
ವಾಣಿಜ್ಯ ಸಂಕೀರ್ಣದ ಕಾಮಗಾರಿಯನ್ನು ಬೆಳ್ತಂಗಡಿ ತಾಲೂಕು ಪಂಚಾಯತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ಮೇ 20ರಂದು
ಪರಿಶೀಲನೆ ಮಾಡಿ ಸಲಹೆ,ಸೂಚನೆ ನೀಡಿದರು.ಆ ಸಂದರ್ಭದಲ್ಲಿ ಕಾಮಗಾರಿಯ ಮೇಲ್ವಿಚಾರಕರು, ಇಂಜಿನಿಯರ್ ಸಾಮ್ರಾಟ್,
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾಮಗಾರಿಯ ಗುತ್ತಿಗೆದಾರರು ಹಾಜರಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಕಾಮಗಾರಿಯ ವಿವರ ನೀಡಿದರು.






