ಕಕ್ಕಿಂಜೆ ಸೈಂಟ್ ಜೋಸೆಫ್ ಆಶ್ರಮದ ಧರ್ಮಗುರು ವಂ. ಫ್ರಾನ್ಸಿಸ್ ಚಿರಕ್ಕಲ್ ರಿಗೆ ಡಾಕ್ಟರೇಟ್

Facebook
Twitter
LinkedIn
WhatsApp

ಬೆಳ್ತಂಗಡಿ; ಕಕ್ಕಿಂಜೆ ಸೈಂಟ್ ಜೋಸೆಫ್ ಆಶ್ರಮದ ಧರ್ಮಗುರು ವಂ. ಫ್ರಾನ್ಸಿಸ್ ಚಿರಕ್ಕಲ್ ಅವರು ಮಂಡಿಸಿದ ವಿಶೇಷ ಪ್ರಬಂಧಕ್ಕೆ ಕ್ರೈಸ್ಟ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ಬೆಂಗಳೂರು ಡಾಕ್ಟರೇಟ್ ಪದವಿ ನೀಡಿದೆ. “ಕೊಲೆಬರೇಶನ್ ಬಿಟ್ವೀನ್ ಗ್ರಾಮ ಪಂಚಾಯತ್ ಏಂಡ್ ವಿಮೆನ್ ಸೆಲ್ಪ್ ಹೆಲ್ಪ್ ಗ್ರೂಪ್ ಆಫ್ ರೂರಲ್ ಡೆವಲಪ್ಮೆಂಟ್ ಇನ್ ಕರ್ನಾಟಕ” ಮಹಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ.
ವಂ..‌ಫ್ರಾನ್ಸಿಸ್ ಅವರು ಕ್ರೈಸ್ಟ್ (ಡೀಮ್ಡ್ ಟು‌ ಬಿ ಯುನಿವರ್ಸಿಟಿ) ಯ ಸೋಷಿಯಲ್ ವರ್ಕ್ ಏಂಡ್ ಸೋಷಿಯಾಲಜಿ ವಿಭಾಗ ಮುಖ್ಯಸ್ಥ ಡಾ.‌ ವಿಕ್ಟರ್ ಪೌಲ್ ಅವರ ನಿರ್ದೇಶನದಲ್ಲಿ ಈ ಪ್ರಬಂಧ ಮಂಡಿಸಿದ್ದಾರೆ.
ಮೂಲತಃ ಎನ್.ಆರ್. ಪುರದವರಾದ ವಂ. ಫ್ರಾನ್ಸಿಸ್ ಅವರು ಬೆಂಗಳೂರು ನೇಷನಲ್ ಕಾಲೇಜು ಜಯನಗರದಲ್ಲಿ ಪದವಿ, ಮಂಗಳೂರು ರೋಷನಿ ನಿಲಯದಲ್ಲಿ ಎಂ.ಎಸ್.ಡಬ್ಲ್ಯು ಸ್ನಾತಕೋತ್ತರ ಪದವಿ ಪಡೆದಿದ್ದಾರೆ‌.
ಕಳೆದ ಎರಡು ವರ್ಷಗಳಿಂದ ಅವರು ಕಕ್ಕಿಂಜೆಯಲ್ಲಿ ಧರ್ಮಗುರುಗಳಾಗಿ ಕರ್ತವ್ಯದಲ್ಲಿದ್ದಾರೆ.

Latest News

Related Posts