ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ವಿಶ್ವ ಪರಿಸರ ದಿನವನ್ನು ಗಿಡ ನೆಡುವುದರ ಮೂಲಕ ಆಚರಿಸಲಾಯಿತು.
‘ನನ್ನೆರಡು ಗಿಡಗಳು ನಾಳೆಗಾಗಿ’ ಎಂಬ ಯೋಜನೆಯ ಮೂಲಕ ಪ್ರತೀ ಸ್ವಯಂಸೇವಕರು ಕನಿಷ್ಟ 2 ಗಿಡಗಳನ್ನು ತಮ್ಮ ಮನೆಯಲ್ಲೇ ನೆಟ್ಟು ಅದರ ದಾಖಲೀಕರಣ ಮಾಡಿದರು.
ಹತ್ತಕ್ಕೂ ಹೆಚ್ಚು ಸ್ವಯಂಸೇವಕರು ಮಾವು, ಹಲಸು, ನಿಂಬೆ, ತೆಂಗು, ಹುಣಸೆ, ತುಂಬೆ, ಕನಕಾಂಬರ ಮುಂತಾದ 30 ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದರು.
ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಪ್ರೊ. ಆಶಾಕಿರಣ್ ಹಾಗೂ ಡಾ. ಲಕ್ಷ್ಮೀನಾರಾಯಣ್ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವರದಿ: ರಶ್ಮಿ ಯಾದವ್ ಕೆ ದ್ವಿತೀಯ ಪತ್ರಿಕೋದ್ಯಮ, ಎಸ್.ಡಿ.ಎಂ. ಕಾಲೇಜು ಉಜಿರೆ






