ಮರಳು ಸಾಗಾಟ ವಾಹನ ತಡೆಹಿಡಿದು ಮತ್ತೆ ಪ್ರತಿಭಟನೆ

Facebook
Twitter
LinkedIn
WhatsApp

ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಫರ್ಲಾಣಿಯಲ್ಲಿ ಜೂನ್ 12ರಂದು ರಾತ್ರಿ ಮರಳು ಸಾಗಾಟದ ಲಾರಿಗಳನ್ನು ಹಾಗೂ ಮರಳು ಸಾಗಾಟಗಾರರ ವಾಹನಗಳನ್ನು ತಡೆಹಿಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಜೂ.9ರಂದು ಇದೇ ರೀತಿ ಪ್ರತಿಭಟನೆ ನಡೆದಾಗ ತಾಲೂಕು ಭೇಟಿಗೆ ಬಂದಿದ್ದ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ತೆರಳಿ, ರಸ್ತೆ ಸರಿಪಡಿಸಿದ ಬಳಿಕ ಮರಳು ಸಾಗಾಟ ನಡೆಸುವಂತೆ ಗಣಿದಣಿಗಳಿಗೆ ಸೂಚಿಸಿದ್ದರು.
ಜಿಲ್ಲಾಧಿಕಾರಿಗಳಲ್ಲಿ ರಸ್ತೆ ದುರಸ್ತಿಗೆ ಒಪ್ಪಿ ಕಾಮಗಾರಿ ಆರಂಭಿಸಿದ್ದ ಮರಳು ಗಣಿದಣಿಗಳು, ದುರಸ್ತಿ ಕಾಮಗಾರಿ ಯನ್ನು ಅರ್ಧದಲ್ಲೇ ನಿಲ್ಲಿಸಿ, ಮತ್ತೆ ಮರಳು ಸಾಗಾಟ ಆರಂಭಿಸಿದ್ದಾರೆಂದು ಆರೋಪಿಸಿ, ಊರವರು ಮತ್ತೆ ಜೂನ್ 12ರ ರಾತ್ರಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯ ಪಿ. ಎಸ್. ಐ. ಪವನ್ ನಾಯಕ್ ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿ, ಜೂನ್ 13ರ ಶನಿವಾರ ಇದನ್ನು ಇತ್ಯರ್ಥ ಗೊಳಿಸುವುದಾಗಿ ಹೇಳಿದರು.
ಅಂತೆಯೇ ಜೂನ್ 13ರ ಶನಿವಾರ ಫರ್ಲಾಣಿಗೆ ಮತ್ತೆ ಆಗಮಿಸಿದ ತಹಶೀಲ್ದಾರ್ ,ಮರಳು ಗಣಿದಣಿಗಳಲ್ರಲಿ ಕೂಡಲೇ ಹಾಳಾಗಿರುವ ಕಡೆ ರಸ್ತೆ ದುರಸ್ತಿ ಪಡಿಸಲು ತಿಳಿಸಿದರು. ಹಾಗೂ ಊರವರು ಇದಕ್ಕೆ ಒಪ್ಪಿಗೆ ಸೂಚಿಸಿ, ರಸ್ತೆ ದುರಸ್ತಿ ಪಡಿಸಿ ಮರಳು ಸಾಗಾಟದ ಮಾಡಿದರೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದರು. ರಸ್ತೆ ಹಾಳಾದರೆ ಕೂಡಲೇ ತನ್ನ ಗಮನಕ್ಕೆ ತರುವಂತೆ ತಹಶೀಲ್ದಾರರು ತಿಳಿಸಿದರು. ಧರ್ಮಸ್ಥಳ ಠಾಣಾ ಪಿ.ಎಸ್.ಐ. ಪವನ್ ನಾಯಕ್, ಕಂದಾಯ ನಿರೀಕ್ಷಕ ಪ್ರತೀಶ್ ಕುಮಾರ್, ಚಾರ್ಮಾಡಿ ಗ್ರಾಮ ಲೆಕ್ಕಿಗ ವಿಜಯ್ , ಚಾರ್ಮಾಡಿ ಗ್ರಾ.ಪಂ.ಅಧ್ಯಕ್ಷೆ ಶೈಲಜಾ ಮೊದಲಾದವರು ಹಾಜರಿದ್ದರು. .

Latest News

Related Posts