ಬೆಳ್ತಂಗಡಿ: ಲಾಯ್ಲದ ಕಪುಚಿನ್ ಕೃಷಿಕ ಸೇವಾ ಕೇಂದ್ರ ಹಾಗೂ ವಿಮುಕ್ತಿ ಸಂಸ್ಥೆಯ ವತಿಯಿಂದ ಚೈಲ್ಡ್ ಫಂಡ್ ಇಂಡಿಯಾದ ಸಹಕಾರದಲ್ಲಿ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ 10ಥರ್ಮಲ್ ಸ್ಯಾನರನ್ನು ಕೊಡುಗೆಯಾಗಿ ನೀಡಿ, ಕೊರೋನಾ ವಾರಿಯರ್ಸ್‌ಗಳ ಸೇವೆಗೆ ಸಹಕರಿಸಲಾಯಿತು. ವಿಮುಕ್ತಿ ಸಂಸ್ಥೆಯ ನಿರ್ದೇಶಕ ವಂದನೀಯ ವಿನೋದ್ ಮಸ್ಕರೇನ್ಹಸ್, ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು ಮತ್ತಿತರರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯವರೇ ಸರಿಯಾಗಿ ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರ ಮರೆತು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾಜಕ್ಕೆ ಕೊರೋನಾ ಸೋಂಕು ಹರಡದಂತೆ ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಪ್ಪು ಸಂದೇಶ ರವಾನಿಸಿದರು.






