ಶಿಶಿಲ: ಇಲ್ಲಿನ ಐತಿಹಾಸಿಕ ಶ್ರೀ ಶಿಶಿಲೇಶ್ವರ ದೇಗುಲದ ಕಪಿಲಾ ನದಿಯಲ್ಲಿರುವ ಪೆರುವೋಳು ಜಾತಿಗೆ ಸೇರಿದ ಮೀನುಗಳು ದೇವರ ಮೀನುಗಳೆಂದೇ ಇಲ್ಲಿನ ಭಕ್ತರ ನಂಬಿಕೆ. ಈ ದೇಗುಲಕ್ಕೆ ಬರುವ ಭಕ್ತರು ಗರ್ಭಗುಡಿಯಲ್ಲಿರುವ ದೇವರಲ್ಲಿ ತೋರುವ ಭಕ್ತಿಯನ್ನು ಈ ಮೀನುಗಳಲ್ಲೂ ತೋರುತ್ತಾರೆ. ಇಂತಹ ದೇವರ ಮೀನುಗಳ ಮೇಲೆ ದುಷ್ಕರ್ಮಿಗಳ ಕಣ್ಣು ಬಿದ್ದರೆ ದೇಗುಲದ ಸ್ಥಳೀಯ ಭಕ್ತರು ಸುಮ್ಮನಿದ್ದಾರೇ… ದುಷ್ಕರ್ಮಿಗಳಿಗೆ ಧರ್ಮದೇಟು ಬೀಳದಿರಲು ಸಾಧ್ಯವೇ…

ಜೂನ್ 21ರ ಆದಿತ್ಯವಾರ ಸೂರ್ಯಗ್ರಹಣದಂದು ಇಲ್ಲಿನ ದೇಗುಲದ ಮೀನಿಗೆ ಗಾಳ ಹಾಕಲು ಬಂದ ಸ್ಥಳೀಯ ಮಸೀದಿಯ ಧರ್ಮಗುರು ಸೇರಿದಂತೆ 7ಮಂದಿ ದುರಾತ್ಮರು ಶಿಶೀಲೇಶ್ವರನ ಭಕ್ತರಿಂದ ಗೂಸಾ ತಿಂದಿದ್ದಾರೆ. ಶಿಶಿಲೇಶ್ವರ ದೇಗುಲದ ಸುತ್ತಮುತ್ತ 2ಕಿ.ಮೀ. ವ್ಯಾಪ್ತಿಯಲ್ಲಿ ಕಪಿಲಾ ನದಿಯಲ್ಲಿ ಮೀನು ಹಿಡಿಯದಂತೆ ನಿಷೇದ ವಿಧಿಸಲಾಗಿದೆ. ಈ ಸತ್ಯವನ್ನರಿತೂ, ಸೂರ್ಯಗ್ರಹಣದ ದಿನ ದೇಗುಲಕ್ಕೆ ಭಕ್ತರು ಬರುವುದಿಲ್ಲ ಎಂಬ ವಿಚಾರವನ್ನರಿತು ಮೀನು ಹಿಡಿಯಲು ಸಂಚು ರೂಪಿಸಿದ ಸ್ಥಳೀಯ ಖತರ್ನಾಕ್ಗಳಿಗೆ ಶಿಶಿಲೇಶ್ವರ ದೇವರು ತನ್ನ ಭಕ್ತರ ಮೂಲಕ ಸರಿಯಾದ ಆತಿಥ್ಯ ಒದಗಿಸಿದ್ದಾನೆ. ಶಿಶಿಲೇಶ್ವರನ ಭಕ್ತರ ಆತಿಥ್ಯ ಸ್ವೀಕರಿಸಿದ ಸಮಾಜಘಾತುಕರು ಇದೀಗ ಧರ್ಮಸ್ಥಳ ಪೊಲೀಸರ ಅತಿಥಿಯಾಗಿದ್ದಾರೆ. ಧಾರ್ಮಿಕ ನಂಬಿಕೆಗೆ ಸವಾಲು ಹಾಕುವ ಇಂತಹ ಕೋಮುಕ್ರಿಮಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಶ್ರೀ ಶಿಶಿಲೇಶ್ವರನ ಭಕ್ತರು ಆಗ್ರಹಿಸಿದ್ದಾರೆ.







