ಪುಂಜಾಲಕಟ್ಟೆ: ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು: ೬೦ ಗ್ರಾಂ ಚಿನ್ನದೊಂದಿಗೆ ಪರಾರಿ!

Facebook
Twitter
LinkedIn
WhatsApp

ಬೆಳ್ತಂಗಡಿ, ಜೂ.೨೫: ಮಳೆಗಾಲ ಪ್ರಾರಂಭವಾಗುತ್ತಿದ್ದOತೆ ಕಳ್ಳರ ಕೈ ಚಳಕ ಪ್ರಾರಂಭವಾಗಿದ್ದು ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಳ ಗ್ರಾಮದ ಪುರುಷೋತ್ತಮ ಗೌಡ ಎಂಬವರ ಮನೆ ಗೆ ಹಾಡುಹಗಲೇ ನುಗ್ಗಿದ ಕಳ್ಳರು ೬೦ ಗ್ರಾಂ ಚಿನ್ನ ದೋಚಿ ಪರಾರಿ ಯಾದ ಘಟನೆ ಬುಧವಾರದಂದು ನಡೆದಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುಳ ಗ್ರಾಮದ ಪುಳಿಮಜಲು ನಿವಾಸಿ ಪುರುಷೋತ್ತಮ ಗೌಡರು ಮನೆಯಲ್ಲಿಲ್ಲದ ವೇಳೆಯನ್ನು ಗಮನಿಸಿ ಬೆಳಗ್ಗಿನ ೯ ಗಂಟೆಯಿAದ ೧.೩೦ ರ ಒಳಗೆ ಈ ಘಟನೆ ನಡೆದಿದ್ದು ಇವರ ಚಲನವಲನ ಗಮನಿಸಿಯೇ ಕಳ್ಳರು ಕೈಚಳಕ ತೋರಿಸಿರಬಹುದೆನ್ನುವ ಶಂಕೆ ವ್ಯಕ್ತವಾಗಿದೆ.
ಕಳವಾದ ೬೦ ಗ್ರಾಂ ಚಿನ್ನದ ಮೌಲ್ಯ ೧ ಲಕ್ಷದ ೮೦ ಸಾವಿರ ಎಂದು ಅಂದಾಜಿಸಲಾಗಿದ್ದು ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ ೪೫೪, ೩೮೦ ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Latest News

Related Posts