ತಹಶೀಲ್ದಾರ್ ಹತ್ಯೆಗೆ ಖಂಡನೆ;ಸರಕಾರಿ ನೌಕರರಿಗೆ ರಕ್ಷಣೆಗೆ ಆಗ್ರಹಿಸಿ ಮನವಿ

ತಹಶೀಲ್ದಾರ್ ಹತ್ಯೆಗೆ ಖಂಡನೆ;ಸರಕಾರಿ ನೌಕರರಿಗೆ ರಕ್ಷಣೆಗೆ ಆಗ್ರಹಿಸಿ ಮನವಿ
Facebook
Twitter
LinkedIn
WhatsApp

ಬೆಳ್ತಂಗಡಿ: ಕೋಲಾರ ಜಿಲ್ಲೆಯ ಬಂಗಾರ್‌ಪೇಟೆ ತಾಲೂಕು ತಹಶೀಲ್ದಾರಾಗಿದ್ದ ಬಿ. ಕೆ. ಚಂದ್ರಮೌಳೇಶ್ವರವರ ಹತ್ಯೆಯನ್ನು ಖಂಡಿಸುವುದರ ಜೊತೆಗೆ ಸರಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಕರ್ತವ್ಯದ ವೇಳೆ ಅಗತ್ಯ ರಕ್ಷಣೆ ನೀಡುವಂತೆ ಆಗ್ರಹಿಸಿ, ಜುಲೈ 10ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯ ವತಿಯಿಂದ ಬೆಳ್ತಂಗಡಿಯ ತಹಶೀಲ್ದಾರ್‌ರ ಮೂಲಕ ಮುಖ್ಯಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಇವರಿಗೆ ಮನವಿ ನೀಡಲಾಯಿತು.


ಈ ಸಂದರ್ಭದಲ್ಲಿ ಹತ್ಯೆಯಾದ ಬಂಗಾರ್‌ಪೇಟೆಯ ತಹಶೀಲ್ದಾರ್ ಚಂದ್ರಮೌಳೇಶ್ವರರ ಅವರ ಆತ್ಮಕ್ಕೆ ಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯ ಅಧ್ಯಕ್ಷ ಡಾ. ಜಯಕೀರ್ತಿ ಜೈನ್‌ರವರ ನೇತೃತ್ವದಲ್ಲಿ ನಡೆದ ಈ ಸಾಂಕೇತಿಕ ಚಳುವಳಿಯಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಶ ಆನಂದ , ಉಪಾಧ್ಯಕ್ಷರಾದ ಜಯರಾಜ್, ಸಿದ್ದೇಶ್, ಪರಮೇಶ್ ಟಿ; ತಾಲೂಕು ಕಾರ್ಯದರ್ಶಿ ರತಘುಪತಿ ಕೆ ರಾವ್, ಪದಾಧಿಕಾರಿಗಳಾದ ಶ ರತ್ನಾವತಿ, ಅನುಪಮಾ, ಶ ವಿಶ್ವ ಕೆ, ಮಹಾವೀರ್ ಹಾಜರಿದ್ದರು. ಕಂದಾಯ ಇಲಾಖೆ ಹಾಗೂ ಇತರ ಇಲಾಖೆಯ ಸಿಬ್ಬಂದಿವರ್ಗದವರು ಈ ಸಾಂಕೇತಿಕ ಚಳುವಳಿಯಲ್ಲಿ ಭಾಗವಹಿಸಿದ್ದರು. ಕೊರೋನಾ ಸೋಂಕು ಹರಡದಂತೆ ಸರಕಾರ ಸೂಚಿಸಿದ ಪ್ರಮುಖ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧಾರಣೆ ಮತ್ತು ವೈಯಕ್ತಿಕ ಅಂತರ ಕಾಪಾಡುವಿಕೆಯನ್ನು ಚಳುವಳಿಯಲ್ಲಿ ಭಾಗವಹಿಸಿದ ಸರಕಾರಿ ನೌಕರರು ಪಾಲಿಸಿದ್ದರು.

Latest News

Related Posts