ಕೊಕ್ಕಡ, ಜು. 15: ಪಟ್ರಮೆ ಗ್ರಾಮದ ಅನಾರು ಮೈಕೆ ಎಂಬಲ್ಲಿ ಗಿರಿಜಾ ಗೌಡ ರವರು ಸಣ್ಣ ಮಕ್ಕಳೊಂದಿಗೆ ಗುಡಿಸಲಿನಂತಿದ್ದ ಮನೆಯಲ್ಲಿ ವಾಸ ಮಾಡುತ್ತಿದ್ದುದನ್ನು ಗಮನಿಸಿ ಪಟ್ರಮೆ ಗ್ರಾಮದ ಅನಾರು ವೀರಕೇಸರಿ ತಂಡವು ಸ್ಥಳೀಯ ಬಿಜೆಪಿ ಗ್ರಾಮಸಮಿತಿ ಪಟ್ರಮೆ, ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಹಾಗೂ ಊರವರ ಸಹಕಾರದಿಂದ ನೂತನವಾಗಿ ನಿರ್ಮಾಣ ಮಾಡಿದ ಮನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಗಿರಿಜಾ ಗೌಡ ರಿಗೆ ಕೀ ಹಸ್ತಾಂತರಿಸಿದರು.


ಈ ಸಂದರ್ಬದಲ್ಲಿ ಮಾತನಾಡಿದ ಹರೀಶ್ ಪೂಂಜಾರವರು ಸುಸಜ್ಜಿತವಾದ ಮನೆಯನ್ನು ನಿರ್ಮಾಣ ಮಾಡಿಕೊಟ್ಟ ವೀರಕೇಸರಿ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಇಂತಹಾ ಕಾರ್ಯವು ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿದ್ದು ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.
ಈ ಸಂದರ್ಬದಲ್ಲಿ ಆರ್.ಎಸ್.ಎಸ್ ಸಂಘಟನೆಯ ಹಿರಿಯ ಮುಖಂಡ ಕೆ. ಕೃಷ್ಣ ಭಟ್ ಹಿತ್ತಿಲು ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ಪಟ್ರಮೆ ಬೂತ್ ಕಮಿಟಿ ಅಧ್ಯಕ್ಷರುಗಳಾದ ಡಾಗಯ್ಯ ಗೌಡ ಪೆರ್ಲೆ, ಉಮೇಶ್ ಗೌಡ, ಧರ್ಮಸ್ಥಳ ಶಕ್ತಿ ಕೇಂದ್ರದ ಅಧ್ಯಕ್ಷ ಯೋಗೀಶ್ ಗೌಡ ಆಲಂಬಿಲ, ರುಕ್ಮಯ ಗೌಡ ಪದಳ, ರತ್ನವರ್ಮ ಜೈನ್ , ವೀರಕೇಸರಿ ತಂಡದ ತಿಲಕ್ ಅನಾರ್, ಮನೋಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ವೀರಕೇಸರಿ ತಂಡದ ತಿಲಕ್ ಅನಾರ್ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಜೈ ಕನ್ನಡಮ್ಮ ಈ ಬಡ ಕುಟುಂಬದ ಬಗ್ಗೆ ವರದಿ ಮಾಡಿತ್ತು
ವರದಿ: ಗುರುಮೂರ್ತಿ.ಎಸ್.ಕೊಕ್ಕಡ.







