ಮಲೆನಾಡಿನ ತಪ್ಪಲಲಿ
ಗಿರಿ ಕಾನನದ ನೆಳಲಿನಲಿ l
ಬೆಚ್ಚನೆಯ ಮಡಿಲಿರಲು
ತೊಟ್ಟಿಲು ತೂಗಿದಾ ತವರೂರು ll೧ll ….ಎಂದೂ ಮರೆಯದ ನನ್ನ ಹುಟ್ಟೂರು…
ನದಿ ತೊರೆಗಳ ಸಿಂಚನಕೆ
ತೊಯ್ದ ತೆನೆಯ ಹಸೆಯಿರಲು ತಾಯ್ನೆಲದ ಮಣ್ಣ ಘಮಘಮವು
ಕೈಬೀಸಿ ಕರೆಯುದೆನ್ನ ತವರೂರುll೨ll…ಎಂದೂ ಮರೆಯದ ನನ್ನ ಹುಟ್ಟೂರು…
ಸೊಗಡಿನ ಜಾತ್ರೆಯೊಳು
ತವರಿನ ಕರೆಯಿರಲುl
ಸಂಭ್ರಮದಿ ಕಂಡ ಶ್ರೀ ಕುತ್ಯಾರು
ಸರಳತೆಯಲಿ ಸಾಗುವ ಬೊಳ್ತೇರುll೩ll…ಎಂದೂ ಮರೆಯದ ನನ್ನ ಹುಟ್ಟೂರು…
ವಿಧವಿಧದ ಧರ್ಮವಿರಲು
ಮತ ಭೇದಎಂದೂ ಇರದುl
ನಮ್ಮೂರ ಚಾವಡಿಯ ಮಹಿಮೆಯದು
ಬೆಲ್ಲದಾ ಸವಿಯಿತ್ತ ತವರೂರುll೪ll…ಎಂದೂ ಮರೆಯದ ನನ್ನ ಹುಟ್ಟೂರು…
-ಡಾ.ಸುಧೀರ್ ಪ್ರಭು-








