ಅಕ್ರಮ‌ ಕಸಾಯಿಖಾನೆಗೆ ದಾಳಿ

ಅಕ್ರಮ ದನ ಸಾಗಾಟದ ಪಿಕಪ್ ಸಹಿತ ಆರೋಪಿಗಳು ಪರಾರಿ
Facebook
Twitter
LinkedIn
WhatsApp

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಂಟಾಲ್‌ಕಟ್ಟೆ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಮೂಡುಬಿದಿರೆ ಪೊಲೀಸರು‌ ಜುಲೈ 20ರಂದು ದಾಳಿ ನಡೆಸಿದ್ದಾರೆ.
ಗಂಟಾಲ್‌ಕಟ್ಟೆ ನೀರಲ್ಕೆ ಎಂಬಲ್ಲಿ ಆರೋಪಿ ಮನ್ಸೂರು ಎಂಬಾತ ತನ್ನ ಮನೆಯ ಹಿಂದೆ ಅಕ್ರಮ ಕಸಾಯಿಖಾನೆ ನಿರ್ಮಿಸಿ, ಮಾಂಸ ಸಿದ್ಧ ಮಾಡುತ್ತಿದ್ದ. ಈತನೊಂದಿಗೆ ಶೌಕತ್, ಮುಸ್ತಾಕ್ ಉಲಾಯಿಬೆಟ್ಟು ಮತ್ತು ಆಸಿಫ್ ಎಂಬವರು ಜೊತೆ ಸೇರಿದ್ದರು. ಆರೋಪಿಗಳು ಜಾನುವಾರುಗಳನ್ನು ಕದ್ದು ತಂದು ಮಾಂಸ ಮಾಡಿ ದಂಧೆ ನಡೆಸುತ್ತಿದ್ದರು. ಪೊಲೀಸ್ ದಾಳಿ ವೇಳೆ ಸ್ಥಳದಲ್ಲಿ ಮೂರು ಕೋಣಗಳು, ದನದ ಮಾಂಸ ಮತ್ತು ಕೃತ್ಯಕ್ಕೆ ಬಳಸಿದ ಆಯುಧಗಳು ಪತ್ತೆಯಾಗಿದೆ. ಆರೋಪಿಗಳು ಪರಾರಿ ಯಾಗಿದ್ದಾರೆ. ಪೊಲೀಸರು ಮೂರು ಜಾನುವಾರುಗಳನ್ನು ರಕ್ಷಿಸಿದ್ದಾರೆ.

Latest News

Related Posts