ಆ್ಯಸಿಡ್ ಸೇವಿಸಿ ಸಾವಿಗೆ ಶರಣು

Facebook
Twitter
LinkedIn
WhatsApp

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕ ನಿವಾಸಿ ಯಶೋಧರರ ಪತ್ನಿ ಜಯಶ್ರೀ (23) ರಬ್ಬರ್ ಮರಗಳಿಗೆ ಹಾಕುವ ಆ್ಯಸಿಡ್ ಸೇವಿಸಿ ಸಾವಿಗೆ ಶರಣಾದ ಘಟನೆ ಜುಲೈ 30ರ ರಾತ್ರಿ ವರದಿಯಾಗಿದ್ದು; ಸಾವಿಗೆ ಶರಣಾಗಲು ಕಾರಣಗಳು ತಿಳಿದಿಲ್ಲ. ವಿವಾಹವಾಗಿ ಎರಡೂವರೆ ವರ್ಷಗಳು ಕಳೆದಿದ್ದು, ಪತಿ-ಪತ್ನಿ ತೀರಾ ಅನ್ಯೋನ್ಯವಾಗಿದ್ದರು ಎನ್ನಲಾಗಿದ್ದು; ಮಕ್ಕಳಾಗಲಿಲ್ಲವೆಂಬ ಕೊರಗು ಸಾವಿಗೆ ಶರಣಾಗಲು ಕಾರಣ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest News

Related Posts