ಬೆಳ್ತಂಗಡಿ: ದಿನಾಂಕ 09-08-2020 ವಿಶ್ವ ಆದಿವಾಸಿಗಳ ದಿನ. ಆದಿವಾಸಿ ಹಕ್ಕುಗಳ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಕಾರ್ಮಿಕ ಮುಂದಾಳು ಬಿ.ಎಂ.ಭಟ್‌ರ ನಾಯಕತ್ವದಲ್ಲಿ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ರಕ್ಷಿತಾರಣ್ಯ ಅಡವಿಯ ಅಳಂಬಾದಲ್ಲಿ ಸ್ಥಳೀಯ ಆದಿವಾಸಿಗಳು ಸೇರಿ ಆದಿವಾಸಿ ದಿನಾಚರಣೆಯನ್ನು ಆಚರಿಸಿದರು. ಭೂಮಿಯ ಹಕ್ಕು ಹಾಗೂ ಸಮುದಾಯ ಹಕ್ಕು ಆದಿವಾಸಿಗಳ ಜನ್ಮ ಸಿದ್ದ ಹಕ್ಕು ಎನ್ನುತ್ತಾ, ಆದಿವಾಸಿ ಹಕ್ಕುಗಳ ರಕ್ಷಣೆಗಾಗಿ ಸಮರ ದೀರ ಹೋರಾಟ ನಡೆಸಲು ಈ ಸಂದರ್ಭದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.
ಬಿ.ಎಂ.ಭಟ್ ಹಾಗೂ ಎಲ್. ಮಂಜುನಾಥ್ ಮಾತಾಡಿದರು. ಕಾರ್ಮಿಕ ನಾಯಕರಾದ ರಾಮಚಂದ್ರ, ಗಣೇಶ, ಸುಜಾತ ಉಪಸ್ಥಿತರಿದ್ದರು. ಸದಾಶಿವ, ಶೇಖರ, ಸುಂದರ, ಬಾಬು, ಚೀಂಕ್ರ, ಹೊನ್ನಯ್ಯ, ಶ್ರೀಧರ, ವಸಂತ, ಅವಿನಾಶ್, ಜಯ, ರವಿ, ಪ್ರಶಾಂತ, ಸುಕುಮಾರ್, ಉದಯ, ರಘು ಮತ್ತಿತರ ಆದಿವಾಸಿ ಪ್ರಮುಖರು ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದರು.






