ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ವತಿಯಿಂದ ಜಲಸಾಕ್ಷರತೆಯ ಬಗ್ಗೆ ರಾಷ್ಟ್ರಮಟ್ಟದ ಆನ್ ಲೈನ್ ವಿಚಾರ ಸಂಕೀರ್ಣವನ್ನು ಆಗಸ್ಟ್ 29ರಂದು ಹಮ್ಮಿಕೊಳ್ಳಲಾಯಿತು
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್. ಎಮ್. ಇವರು ಆನ್ ಲೈನ್ ಮೂಲಕ ಜಲಸಾಕ್ಷರತೆಯ ಬಗ್ಗೆ ಉಪನ್ಯಾಸ ನೀಡಿದರು. ಅಭಿಯಾನದ ಪ್ರಾಯೋಗಿಕ ಉದಾಹರಣೆಗಳ ಸಹಿತ ಮಳೆ ನೀರು ಕೊಯ್ಲು ಬಗ್ಗೆ ಮಾಹಿತಿ ನೀಡಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮವನ್ನು ಸೇಕ್ರೆಡ್ ಹಾರ್ಟ್ ಕಾಲೇಜು ಆಯೋಜಿಸಿತ್ತು.
ವಿವಿಧ ರಾಜ್ಯಗಳಿಂದ ಆಸಕ್ತ ವಿದ್ಯಾರ್ಥಿಗಳು, ಪರಿಸರ ಪ್ರಿಯರು ಭಾಗವಹಿಸಿದ್ದರು. ಕಾರ್ಯಕ್ರಮ ವನ್ನು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಆಲ್ವಿನ್ ಕೆ. ಜಿ. ಸಂಯೋಜಿಸಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಪ್ರೊ. ಜೆ. ಬಿ. ಡಿ’ಸೋಜ ಸ್ವಾಗತಿಸಿದರು. ಪ್ರೊ. ವಿನ್ಸೆಂಟ್ ಡಿ’ಸೋಜ ವಂದಿಸಿದರು. ರಾಬಿನ್ ಜೋಸೆಫ್ ಸೆರಾ ಕಾರ್ಯಕ್ರಮ ನಿರೂಪಿಸಿದರು.
ಡಾ. ಜೋಸೆಫ್ ಎನ್. ಎಮ್.ರು ಜಲಸಾಕ್ಷರತೆ ಬಗ್ಗೆ ನೀಡಿದ ಉಪನ್ಯಾಸ; ಪರಿಸರದ ಬಗ್ಗೆ ಅವರಲ್ಲಿರುವ ಜ್ಞಾನ, ಅನುಭವದ ಅನೇಕ ಜಲತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದರು.






