ಬೆಳ್ತಂಗಡಿ: ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಹಸ್ತವನ್ನು ನೀಡುವ ದಿನವಾಗಿ ಆಚರಿಸಲ್ಪಡುವ ಸೆಪ್ಟೆಂಬರ್ 22 “ರೋಸ್ ಡೇ” ಯನ್ನು ಬೆಳ್ತಂಗಡಿ ರೋಟರಿ ಕ್ಲಬ್‌ನ ಸದಸ್ಯರ ಸಹಕಾರದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಿಡ್ಲೆ ಗ್ರಾಮದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ನಾಲ್ಕೂವರೆ ವರ್ಷದ ಮಗುವಿನ ಚಿಕಿತ್ಸೆಗಾಗಿ ರೂಪಾಯಿ 25000/- ವನ್ನು ನೀಡುವುದರ ಮೂಲಕ ಅರ್ಹರಿಗೆ ಸಹಾಯಹಸ್ತ ಚಾಚಲಾಯಿತು. ಈ ಕಾರ್ಯಕ್ರಮದಲ್ಲಿ ಮಗುವಿನ ತಂದೆ ಜಯಂತ್, ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ್ ಕೆ. ವಿ. ಹಾಗೂ ನಿರ್ದೇಶಕ ಅನಂತ ಭಟ್ ಮಚ್ಚಿಮಲೆ ಹಾಗೂ ರಬ್ಬರ್ ಸೊಸೈಟಿ ಉಜಿರೆಯ ನಿರ್ದೇಶಕರಾದ ಬಿ. ಎಸ್. ಅಬ್ರಹಾಂ ಕಾಯರ್ತಡ್ಕ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಬೆಳ್ತಂಗಡಿ ಪರವಾಗಿ ಮಗು ಶೀಘ್ರವಾಗಿ ಗುಣಮುಖವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.






