ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ಜಂಟಿ ಅಶ್ರಯದಲ್ಲಿನೊಂದಣಿಯಾದ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮಹಾಗೂ ಕಾರ್ಮಿಕರ ಸೌಲಭ್ಯಗಳ ಮಾಹಿತಿ ಕಾರ್ಯಾಗಾರವು ನವೆಂಬರ್ 1ರಂದು ಮರೋಡಿ ಗ್ರಾಮಪಂಚಾಯತ್ ಸಭಾ ಭವನ ದಲ್ಲಿ ನಡೆಯಿತು.ಭಾರತೀಯ ಮಜ್ದೂರ್ ಸಂಘದ ಮರೀಡಿ ಗ್ರಾಮ ಸಮಿತಿ ಅಧ್ಯಕ್ಷ ಗಣೇಶ್ ಕರ್ಕೇರ ಇವರ ನೇತ್ರತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ತಾಲೂಕು ಸಮಿತಿ ಅಧ್ಯಕ್ಷರಾದ ಉದಯ ಬಿ. ಕೆ. ಅವರು ಭಾರತೀಯ ಮಜ್ದೂರ್ ಸಂಘ ಕಾರ್ಮಿಕರ ಸೌಲಭ್ಯಗಳನ್ನು ಸುಲಭವಾಗಿ ತೆಗೆಸಿಕೊಡಲು ನೆರವಾಗುತ್ತಿದೆ. ಹಾಗೂ ರಾಷ್ಟ್ರದ ಉನ್ನತಿಯ ಕಾರ್ಯದಲ್ಲಿ ಕಾರ್ಮಿರನ್ನು ಜೋಡಿಸುತ್ತಿದೆ. ಬಿ.ಎಂ.ಎಸ್ ನ ಸ್ಥಾಪಕರಾದ ದತ್ತೋ ಪಂತ ಥೇಂಗಡಿಜೀ ಅವರ ಕನಸನ್ನು ಸಾಕಾರ ಮಾಡಲು ಕಾರ್ಮಿಕರ ಸಹಕಾರ ಅಗತ್ಯ ಎಂದು ಹೇಳಿದರು.ಬಿ.ಎಂ.ಎಸ್ ನ ತಾಲೂಕು ಸಮಿತಿ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅವರು ಕಾರ್ಮಿಕರಿಗಿರುವ ಸೌಲಭ್ಯಗಳು ಹಾಗೂ ಜೀವನ ಭೀಮಾ ಹಾಗೂ ಸುರಕ್ಷಾ ಇನ್ಸೂರೆನ್ಸ್ ಯೋಜನೆಗಳು ಹಾಗೂ ಪ್ರಧಾನ ಮಂತ್ರಿ ಶ್ರಮ ಯೋಗಿಕ್ ಪಿಂಚಣಿ ಯೋಜನೆಗಳ ಮಾಹಿತಿ ನೀಡಿದರು. ನಂತರ ಸುಮಾರು 25 ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿ.ಎಂ.ಎಸ್ ಪ್ರಾಯೋಜಿತ KSRTC ಬಸ್ ಚಾಲಕರ ಸಂಘ ಉಡುಪಿ- ಮಂಗಳೂರು ಜಿಲ್ಲೆಯ ಸ್ಥಾಪಕಾಧ್ಯಕ್ಷರು ಡಿ ಬಾಲಕೃಷ್ಣ ಮತ್ತು ಗ್ರಾಮ ಸಮಿತಿ ಮಾಜೀ ಅಧ್ಯಕ್ಷ ಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಯಶೋಧರ ಆಚಾರ್ಯ ನಿರೂಪಿಸಿ, ಸ್ವಾಗತಿಸಿದರು. ಪ್ರಮೋದ್ ಕುಲಾಲ್ ವಂದಿಸಿದರು.






